ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣ (Revanna) ಮತ್ತು ಪ್ರಜ್ವಲ್ ರೇವಣ್ಣ (Prajwal revanna) ಇಬ್ಬರಿಗೂ ತೀರ್ಪ್ರ ಸಂಕಷ್ಟ ಎದುರಾಗಿದೆ . ಈ ಮುನ್ನ ಪ್ರಜ್ವಲ್ ರೇವಣ್ಣ ವಿಚಾರವಾಗಿ ಲುಕ್ ಔಟ್ ನೋಟಿಸ್ (Lookout notice) ಜಾರಿ ಮಾಡಿದ್ದ ತನಿಖಾಧಿಕಾರಿಗಳು ಈಗ ರೇವಣ್ಣರಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಈಗಾಗಲೇ ರೇವಣ್ಣ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಪಟ್ಟಹಾಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ (SIT) ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರೂ ಸಹ , ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ . ಹೀಗಾಗಿ ಇದೀಗ ಅವರ ವಿರುದ್ಧವು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಹೊಳೆನರಸೀಪುರದಲ್ಲಿ (Hole Narasipura) ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಪಟ್ಟ ಹಾಗೆ ತನಿಕೆಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐ ಟಿ (SIT) ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ ಹೊರತಾಗಿಯೂ ಕಳೆದ ಮೂರು ದಿನಗಳಿಂದ ರೇವಣ್ಣ ಕಣ್ಮರೆಯಾಗಿರುವುದರಿಂದ, ಇದೀಗ ಅಧಿಕಾರಿಗಳು ರೇವಣ್ಣ ಅವರಿಗೂ ನೋಟಿಸ್ ಜಾರಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಆ ಮೂಲಕ ತಂದೆ ಮಗ ಇಬ್ಬರಿಗೂ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾದಂತಾಗಿದೆ.