ಪ್ರಜ್ವಲ್ ರೇವಣ್ಣ (Prajwal revanna) ವಿರುದ್ಧ ಮೇಲಿಂದ ಮೇಲೆ ಪ್ರಕರಣಗಳು ದಾಖಲಾಗುತ್ತಿದ್ದು ಇಂದು ಅವರ ವಿರುದ್ಧ ಮೂರನೇ FIR ದಾಖಲಾಗಿದೆ. ಉಳಿದ ಎರಡು ಪ್ರಕರಣಗಳಿಗಿಂತಲೂ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾದಂತೆ ಕಾಣುತ್ತಿದೆ.
ಇದೀಗ ಮತ್ತೊಂದು ಸಂತ್ರಸ್ಥೆ ತಮಗೆ ಆದ ಲೈಂಗಿಕ ದೌರ್ಜನ್ಯದ (Sexual harassment) ಬಗ್ಗೆ ದೂರು ದಾಖಲಿಸಿದ್ದು, ಪ್ರಜ್ವಲ್ ರೇವಣ್ಣ ತಮಗೆ ಗನ್ (Gün) ತೋರಿಸಿ ಬೆದರಿಸಿ ಅತ್ಯಾಚಾರ (Rape) ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಆ ಮೂಲಕ ಈ ಪ್ರಕರಣದಲ್ಲಿ 376 ಸೆಕ್ಷನ್ ಒಳಗೊಳ್ಳಲಿದ್ದು, ಪ್ರಜ್ವಲ್ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಪ್ರಜ್ವಲ್ ರೇವಣ್ಣ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ನನ್ನ ಮೇಲೆ ಅತ್ಯಾಚಾರ ಬೆಸುಗಿದ್ದಾರೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಕೊಡಿಸಿ ಎಂದು ಮನವಿ ಮಾಡಲು ತೆರಳಿದ್ದಾಗ ಹೆದರಿಸಿ ನನ್ನ ಮೇಲೆ ಅತ್ಯಾಚಾರವೇ ಸಿಗಿ ಅದನ್ನು ವಿಡಿಯೋ ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಸಹ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪಾರಾಗುವುದು ಅಸಾಧ್ಯ ಎಂದು ಭಾವಿಸಲಾಗ್ತಿದೆ.
ಒಟ್ನಲ್ಲಿ ಈ ಎಲ್ಲಾ ಬೆಳವಣಿಗೆಗಳಿಂದ ಇನ್ನಷ್ಟು ಸಂತ್ರಸ್ತೆಯರು ಧೈರ್ಯ ಮಾಡಿ ಮುಂದೆ ಬಂದು ಪ್ರಜ್ವಲ್ ರೇವಣ್ಣ ವಿರುದ್ಧ ತಮಗಾಗಿರುವ ಅನ್ಯಾಯದ ವಿರುದ್ಧ ದೂರು ದಾಖಲಿಸಲು ಮುಂದಾದರೆ ಪ್ರಜ್ವಲ್ ರೇವಣ್ಣಗೆ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾಗೋದ್ರಲ್ಲಿ ಅನುಮಾನವೇ ಇಲ್ಲ.