ಹಾಸನದಲ್ಲಿ (Hassan) ಹರಿದಾಡಿ, ರಾಜ್ಯ ಮಾತ್ರವಲ್ಲದೇ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಪೆನ್ ಡ್ರೈವ್ (pendrive) ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ (prajwal revanna) ತಮ್ಮ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಈ ಸ್ಮರಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧವಿರಲಿಲ್ಲ ಮತ್ತು ಲಭ್ಯವಿರಲಿಲ್ಲ ಕೂಡ. ಆದ್ರೆ ಇದೀಗ ವಿದೇಶದಲ್ಲಿ ಇದ್ದುಕೊಂಡೇ ಟ್ವಿಟ್ (Tweet) ಮಾಡುವ ಮೂಲಕ ಪಜ್ವಲ್ ತಮ್ಮ ಫಸ್ಟ್ ರಿಯಾಕ್ಷನ್ (First reaction) ಕೊಟ್ಟಿದ್ದಾರೆ.
ನಾನು ಬೆಂಗಳೂರಿನಲ್ಲಿ (Bangalore) ಇರದ ಕಾರಣ ತನಿಖೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ವಕೀಲರ ಮೂಲಕ 7 ದಿನಗಳ ಸಮಯ ಕೇಳಿದ್ದೇನೆ. ಸತ್ಯ ಅದಷ್ಟೂ ಬೇಗ ಹೊರಬರಲಿದೆ ಎಂದು ಪ್ರಜ್ವಲ್ ಟ್ವಿಟ್ ಮಾಡಿದ್ದಾರೆ. ಸದ್ಯ ಪ್ರಜ್ವಲ್ ಎಲ್ಲಿದ್ದಾರೆ ಎಂಬ ವ್ಯಾಪಕ ಚರ್ಚೆಯ ನಡುವೆ ಅವರ ಈ ಟ್ವಿಟ್ ಕುತೂಹಲಕ್ಕೆ ಕಾರಣವಾಗಿದೆ.