ಹಾಸನದ (Hassan) ಹೊಳೆನರಸೀಪುರದ (Holenarasipura) ಹೆಚ್‌ಡಿ ರೇವಣ್ಣ (HDrevanna) ಮನೆಗೆ SIT ಟೀಂ ಭೇಟಿ ನೀಡೋ ಸಾಧ್ಯತೆ ಇದೆ. ಇವತ್ತು ಭೇಟಿ ಕೊಟ್ಟರೆ ದೂರು ನೀಡಿದ್ದ ಸಂತ್ರಸ್ಥ ಮಹಿಳೆಯರ (victims) ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯಲಿದೆ.

ಮಹಿಳೆಯೊಬ್ಬರು ತಾನು ಮನೆಗೆಲಸ ಮಾಡೋವಾಗ ಲೈಂಗಿಕ ಕಿರುಕುಳ (sexual harrestment) ನೀಡಿದ್ದರ ಬಗ್ಗೆ ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದರು. ಮಹಿಳೆಯ ಹೇಳಿಕೆಯನ್ನ ದಾಖಲಿಸಿಕೊಂಡಿರೋ ಪೊಲೀಸರು ಇಂದು ಖುದ್ದು ರೇವಣ್ಣ ಮನೆಗೆ ಭೇಟಿ ನೀಡಿ ಸ್ಥಳ ಮಹಜರ್ ನಡೆಸೋ ಸಾಧ್ಯತೆ ಇದೆ.
ಇನ್ನು ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ (prajwal revanna) ಇಬ್ಬರಿಗೂ ಪೊಲೀಸರು ನೋಟೀಸ್ (Notice) ನೀಡೋಕೆ ಹೋದಾಗ ರೇವಣ್ಣ ಮನೆಯಲ್ಲಿ ಯಾರೂ ಇಲ್ಲದೆ ಇದ್ದಿದ್ದರಿಂದ ಬಾಗಿಲಿಗೆ ನೊಟೀಸ್ ಅಂಟಿಸಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಈ ನೋಟೀಸ್ ನ ಮನೆಗೆಲಸದವು ಕಿತ್ತುಹಾಕಿದ್ದಾರೆ.
			
                                
                                
                                
