ಪ್ರತಿಯೊಬ್ಬ ಮಹಿಳೆಯು ಕೂಡ ಫ್ಯಾಷನ್ (fashion) ಪ್ರಿಯರು.. ಫ್ಯಾಷನ್ ಅಂತ ಬಂದಾಗ ಡ್ರೆಸ್ಸಿಂಗ್ (dressing)ಮಾತ್ರವಲ್ಲದೆ ಜುವೆಲ್ಸ್ , ಮೇಕಪ್ ಬಗ್ಗೆನೂ ಕಾಳಜಿ ವಹಿಸುತ್ತಾರ..ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಬಗ್ಗೆನೂ ಕೂಡ ಪ್ರತಿಯೊಬ್ಬರು ಹೆಚ್ಚು ಕಾನ್ಸನ್ಟ್ರೇಟ್ ಮಾಡ್ತಾರೆ..
![](https://pratidhvani.com/wp-content/uploads/2024/04/IMG_6794-1.jpeg)
ನೈಲ್ ಆರ್ಟ್ (nail art)ಬಗ್ಗೆಯು ಹೇಳೋದಕ್ಕೆ ಹೆಚ್ಚಿದೆ ..ಕೆಲವೊಬ್ಬರಿಗೆ ಪ್ಲೈನ್ ಅಂಡ್ ಸಿಂಪಲ್ ನೈಲ್ ಕಲರ್ ಇಷ್ಟ ಆಗುತ್ತೆ.. ಇನ್ನು ಕೆಲವೊಬ್ಬರು ತಮ್ಮ ಡ್ರೆಸ್ ಗೆ ಮ್ಯಾಚ್ ಆಗುವಂತ ನೈಲ್ ಆರ್ಟ್ ಮಾಡಿಸಿದ್ರೆ. ಹಾಗೂ ಮದುವೆ ಸಂಭ್ರಮಕ್ಕೆ ಬೇಕಾದಂತಹ ಗ್ರಾಂಡ್ ಹೆವಿ ನೈಲ್ ಆರ್ಟ್ ಮಾಡಿಸ್ತಾರೆ ಅಥವಾ ಪಾರ್ಟೀಸ್ ಗೆ ಬೇಕಾದಂತ ಆರ್ಟ್ ಗಳು , ಅಬ್ಬಬ್ಬಾ ತುಂಬಾ ವೆರೈಟಿ ನೈಲ್ ಆರ್ಟ್ ಗಳಿವೆ..
![](https://pratidhvani.com/wp-content/uploads/2024/04/IMG_6795.jpeg)
ಸದ್ಯ ಟ್ರೆಂಡ್ (trend)ಅಲ್ಲಿ ಇರೋದು ಅಂದ್ರೆ ಸೀಸನ್ ವೈಸ್ ನೈಲ್ ಆರ್ಟ್ . ಏನಪ್ಪ ಸೀಸನ್ ನೈಲ್ ಆರ್ಟ್ ಅಂತಿರಾ? ಮಳೆಗಾಲ ಬಂತು ಅಂದ್ರೆ ಮಳೆಗಾಲಕ್ಕೆ ತಕ್ಕಂತ ಆರ್ಟ್ ಗಳು ಇಲ್ಲಿ ಹೆಚ್ಚಾಗಿ ನೀಲಿ ಬಣ್ಣ ಬಿಳಿ ಬಣ್ಣದ ಕಲರ್ ನ ಬಳಸ್ತಾರೆ..ಡಿಸೈನ್ ವೈಸ್ design)ನೋಡ್ತಾ ಹೋದ್ರೆ ಅಂಬ್ರೆಲಾ ಡಿಸೈನ್ , ರೇನ್ ಡ್ರಾಪ್ ಡಿಸೈನ್ ಹೀಗೆ ಸಾಕಷ್ಟಿವೆ..
ಇವಾಗ ಯಾವ್ ಸೀಸನ್ ಅಂತ ನಿಮಗೆ ಗೊತ್ತೇ ಇದೆ.. ಸಮ್ಮರ್ ..ಬೇಸಿಗೆ ಗೆ ತಕ್ಕಂತ ನೈಲ್ ಆರ್ಟ್ ಸದ್ಯ ಚಾಲ್ತಿಯಲ್ಲಿದೆ..
ಸನ್ ರೇಸ್ (sun rises)
ಬೇಸಿಗೆ ಅಂದ್ರೆ ಸೂರ್ಯನ ಕಿರಣಗಳು ಹೆಚ್ಚಿರತ್ತೆ..ಅದರಲ್ಲೂ ಈ ಸಲದ ಬಿಸಿಲು ಸುಡುವಂತಿದೆ..ತಮ್ಮ ಉಗುರುಗಳ ಮೇಲೆ ಸೂರ್ಯನ ಕಿರಣಗಳ ಆರ್ಟ್ ನ ಮಾಡಿಸ್ಕೊಳ್ತಾರೆ..ಕೇಸರಿ , ಹಳದಿ ಬಣ್ಣವನ್ನು ಇಲ್ಲಿ ಬಳಸ್ತಾರೆ..
![](https://pratidhvani.com/wp-content/uploads/2024/04/IMG_6797-1.jpeg)
ಫ್ರೂಟ್ಸ್ ಡಿಸೈನ್(Fruits design)
ಬೇಸಿಗೆಯಲ್ಲಿ ನಾವು ಹೆಚ್ಚು ತಿನ್ನುವಂತಹ ಹಣ್ಣು ಅಂತ ಹೇಳಿದ್ರೆ ಕಲ್ಲಂಗಡಿ, ಮಸ್ಕ್ ಮೆಲನ್. ವೆಜಿಟೇಬಲ್ಸ್ ಅಂತ ಬಂದಾಗ ಸೌತೆಕಾಯಿ ಆಗಿರಬಹುದು ನಿಂಬೆಹಣ್ಣಿನ ಜ್ಯೂಸ್ ಬಳಸ್ತೀವಿ ..ಇದೀಗ ಫ್ಯಾಷನ್ ಪ್ರಿಯರು ಇದನ್ನೇ ತಲೆಯಲ್ಲಿಟ್ಟುಕೊಂಡು ಈ ಡಿಸೈನ್ ಗಳನ್ನ ನಮ್ಮ ಉಗುರುಗಳ ಮೇಲೆ ಆರ್ಟ್ ಮಾಡ್ತಾ ಟ್ರೆಂಡ್ ಸೆಟ್ ಮಾಡ್ತಾ ಇದ್ದಾರೆ..
![](https://pratidhvani.com/wp-content/uploads/2024/04/IMG_6792.jpeg)
ಬೀಚ್ ವ್ಯೂ(beach view)
ಇನ್ನು ಸಮ್ಮರ್ ಅಲ್ಲಿ ಹೆಚ್ಚಾಗಿ ನಾವು ವಿಸಿಟ್ ಮಾಡುವಂತಹ ಪ್ಲೇಸ್ ಅಂದ್ರೆ ಬೀಚ್. ಬೀಚ್ ಸೈಡ್ ಅಲ್ಲಿ ಇರುವಂತಹ ತೆಂಗಿನ ಮರ ಇರಬಹುದು ಅಥವಾ ಅಲೆಗಳಿರಬಹುದು ನೀರಿನ ರಬಸ ಇರಬಹುದು.. ಟೋಟಲಿ ಬೀಚ್ ವೀವ್ ನ ನಿಮ್ಮ ಉಗುರಿನ ಮೇಲೆ ನೋಡಬಹುದು..
![](https://pratidhvani.com/wp-content/uploads/2024/04/IMG_6790-1.jpeg)
ಇನ್ನು ಯಾವುದೇ ತೀಮ್ ಇಲ್ಲದೆ ಪ್ಲೇನ್ ಕಲರ್ ಅನ್ನ ಉಗುರಿಗೆ ಹಚ್ತಾರೆ.. ಅದರಲ್ಲಿ ನೀಲಿ ಬಣ್ಣ , ಬೇಬಿ ಪಿಂಕ್ ,ಮಿಂಟ್ ಗ್ರೀನ್ ಹಾಗೂ ಸಾಫ್ಟ್ ಲೆಮೆನ್ ಹೀಗೆ ಸಾಕಷ್ಟು ಕಲರ್ ಗಳು ಜನರನ್ನ ಆಕರ್ಷಿಸ್ತಾ ಇದೆ..
![](https://pratidhvani.com/wp-content/uploads/2024/04/IMG_6796-1.jpeg)
ಒಟ್ಟಿನಲ್ಲಿ ಹೇಳೋದಾದ್ರೆ ಫ್ಯಾಷನ್ ಪ್ರಿಯರು ಟೈಮ್ ಗೆ ತಕ್ಕಂತೆ ತಮ್ಮ ಫ್ಯಾಶನ್ ಸೆನ್ಸ್ ಹಾಗೂ ಟ್ರೆಂಡನ್ನು ಚೇಂಜ್ ಮಾಡ್ತಾನೆ ಇರ್ತಾರೆ