ಹುಬ್ಬಳ್ಳಿಯಲ್ಲಿ (Hubli) ನಡೆದಿರುವ ನೇಹಾ ಹಿರೇಮಠ್ (Neha hiremat) ಕೊಲೆ ಪ್ರಕರಣದಲ್ಲಿ ತಾವು ನಿನ್ನೆ ಕೊಟ್ಟಿರುವ ಹೇಳಿಕೆ ಅವರ ಪೋಷಕರಿಗೆ ನೋವುಂಟು ಮಾಡಿದ್ರೆ, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್( parameshwar ) ಹೇಳಿದ್ದಾರೆ.
ಬೆಂಗಳೂರಿನ(Bengalore)ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹೇಳಿಕೆಯಿಂದ ಅವರ ಪೋಷಕರಿಗೆ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ. ಆದ್ರೆ, ಸತ್ಯ ತನಿಖೆಯ ನಂತರ ಬಯಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ನಿನ್ನೆ ನೇಹಾ (Neha) ಮತ್ತು ಫಯಾಜ್ (Faiaz) ನಡುವೆ ಲವ್ ಅಫೇರ್ (Love affair) ಇತ್ತು ಎಂದು ಮಾಹಿತಿ ದೊರೆತಿದೆ ಎಂದು ಹೇಳಿದ್ದ ಪರಮೇಶ್ವರ್ ರ ಹೇಕಿಕೆಯನ್ನ ನೇಹಾ ತಂದೆ ನಿರಂಜನ್ ಹಿರೇಮಠ್ ಖಂಡಿಸಿದ್ದರು. ನಮ್ಮ ಮನೆತನದ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ನೀಡಬೇಡಿ ಎಂದು ಅಸಮಾಧಾನಗೊಂಡಿರು. ಹೀಗಾಗಿ ಇಂದು ಗೃಹ ಸಚಿವ ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದ್ದಾರೆ.