ಪ್ಲೈ ಓವರ್ ಕಾಮಗಾರಿ, ನಾಲ್ಕು ತಿಂಗಳೂ ಟ್ರಾಫಿಕ್.. ಟ್ರಾಫಿಕ್..!
ಹೆಬ್ಬಾಳ ಕಡೆ ಓಡಾಡೋ ಸವಾರರೆ ನಾಳೆಯಿಂದ ಹುಷಾರ್..!
ಹೆಬ್ಬಾಳ ಫ್ಲೈಓವರ್ ಟ್ರಾಫಿಕ್ ಗೆ ಬ್ರೇಕ್ ಹಾಕಲು ತಾತ್ಕಾಲಿಕವಾಗಿ ಸಂಚಾರ ಸ್ಥಗಿತ ಪ್ಯಾಕೇಜ್
ಬೆಂಗಳೂರಲ್ಲಿ ಮೊದಲೇ ಟ್ರಾಫಿಕ್ ಜಾಸ್ತಿ.. ಹೆಬ್ಬಾಳ ಫ್ಲೈ ಓವರ್ ಬಳಿಯ ಟ್ರಾಫಿಕ್ ಬಗ್ಗೆ ಹೇಳೋದೆ ಬೇಕಿಲ್ಲ.. ಅಲ್ಲಿ ಟ್ರಾಫಿಕ್ ಕಮ್ಮಿ ಮಾಡ್ಬೇಕು ಅಂತಾ ಬಿಡಿಎ ಮತ್ತು ಸಂಚಾರ ಇಲಾಖೆ ಹೊಸ ಪ್ಲಾನ್ ಹಾಕಿದೆ.. ಈ ಹೊಸ ಪ್ಲಾನ್ ನಿಂದ ಟ್ರಾಫಿಕ್ ಕಮ್ಮಿ ಆಗುತ್ತೆ ಅಂದ್ಕೊಂಡ್ರೆ ಮುಂದಿನ ನಾಲ್ಕು ತಿಂಗಳು ಹೆಬ್ಬಾಳ, ಕೆ ಆರ್ ಪುರಂ ಬಳಿ ಫುಲ್ ಟ್ರಾಫಿಕ್ ಇರಲಿದೆ..! ಮೊದಲೆ ಟ್ರಾಫಿಕ್ ನಿಂದ ಸಾಕಪ್ಪಾ ಅನ್ನೋಹಾಗಿದೆ.. ಇನ್ನು ಈ ರಣ ಬಿಸಲಿಲ್ಲಿ ಗಾಡಿ ಮೇಲೆ ಹೊರಗ್ ಬರೋಕೆ ಭಯ ಆಗ್ತಿದೆ.. ಕೆಲಸ ಕಾರ್ಯಗಳಿರೋದ್ರಿಂದ ಹೊರಗ್ ಬರ್ಲೇ ಬೇಕಿದೆ.. ಈ ನಡುವೆ ಹೆಬ್ಬಾಳ-ಕೆಆರ್ ಪುರಂ ಕಡೆ ಇನ್ಮುಂದೆ ನಾಲ್ಕು ತಿಂಗ್ಳೂ ಫುಲ್ ಟ್ರಾಫಿಕ್ ಇರಲಿದೆ..
ಹೆಬ್ಬಾಳ ಫ್ಲೈ ಓವರ್ ನಲ್ಲಿ ಕೆಲ ಬದಲಾವಣೆ ಮಾಡೋದಕ್ಕೆ ಬಿಡಿಎ ಮುಂದಾಗಿದೆ.. ಕೆ ಆರ್ ಪುರಂನಿಂದ ಹೆಬ್ಬಾಳ ಮೂಲಕ ಬೆಂಗಳೂರಿಗೆ ಕನೆಕ್ಟ್ ಆಗೋ ಸ್ಪ್ಯಾನ್ ಮತ್ತು ಹೆಬ್ಬಾಳದಿಂದ ಕೆ ಆರ್ ಪುರಂ ಕಡೆ ಕನೆಕ್ಟ್ ಆಗೋ ಸ್ಪ್ಯಾನ್ ರಿಮೂವ್ ಮಾಡಿ ಬ್ಯಾಪಿಸ್ಟ್ ಆಸ್ಪತ್ರೆ ಕಡೆ ಕನೆಕ್ಟ್ ಮಾಡೋಕೆ ಪ್ಲಾನ್ ಮಾಡಿದೆ.. ನಾಳೆಯಿಂದ ಈ ಸ್ಪ್ಯಾನ್ ಹಳ ಮೂಲಕ ಸಂಚಾರ ಮಾಡೋ ಟೂ ವ್ಹೀಲ್ ಗಳಿಗೆ ಮಾತ್ರ ಎಂಟ್ರಿ ಇದ್ದು ಎಲ್ಲಾ ರೀತಿಯ ಫೋರ್ ವ್ಹೀಲ್ ವೈಹಿಕಲ್ಗಳಿಗೆ ನಿಷೇಧಿಸಲಾಗಿದೆ..
ಈ ಕಾಮಗಾರಿ ಹಿನ್ನೆಲೆ ನಗರಕ್ಕೆ ಎಂಟ್ರಿ ಮತ್ತು ಎಕ್ಸಿಟ್ ಗೆ ಒಂದಷ್ಟು ಮಾರ್ಗ ಬದಲಾವಣೆ ಮಾಡಿ ಸಂಚಾರಿ ಇಲಾಖೆ ಆದೇಶಿಸಿದೆ..
ಹಾಗಾದ್ರೆ ಯಾವ್ಯಾವ ರೂಟನ್ನ ಬಳಸ್ಬೋದು ಅನ್ನೋದನ್ನ ನೊಡೋದಾದ್ರೆ..:-
- ನಾಗವಾರ ಕಡೆಯಿಂದ ಹೆಬ್ಬಾಳ ಮೇಲೇತುವೆ ಕಡೆಗೆ ಬರುವ ವಾಹನಗಳ ಪೈಕಿ ದ್ವಿ-ಚಕ್ರ ವಾಹನಗಳಿಗೆ ಮಾತ್ರ ಅವಕಾಶ. ಉಳಿದೆಲ್ಲಾ ವಾಹನಗಳಿಗೆ ಕೆ.ಆರ.ಪುರ ಅಪ್-ರಾಂಪ್ ಅನ್ನು ಮುಚ್ಚಲಿದ್ದು, ಬೇರೆ ವಾಹನಗಳ ಸಂಚಾರಕ್ಕೆ ನಿಷೇಧ..
- ನಾಗವಾರ (ಔಟರ್ ರಿಂಗ್ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖಿ ಸರ್ಕಲ್ ಮುಖಾಂತರ ಬರುತ್ತಿದ್ದ ವಾಹನಗಳ ಚಾಲಕರು ಹೆಬ್ಬಾಳ ಸರ್ಕಲ್ನಲ್ಲಿ ಫೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್ ಬಳಿ ಯೂ ಟರ್ನ್ ಪಡೆದು ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫೈಓವರ್ನ ರಾಂಪ್ ಮುಖೇನ ನಗರದ ಕಡೆಗೆ ಚಲಿಸಲು ಸೂಚಬೆ..
- ಕೆ.ಆರ್.ಪುರ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳ ಚಾಲಕರು ಪರ್ಯಾಯ ಮಾರ್ಗಗಳಾದ,
- ಐ.ಒ.ಸಿ-ಮುಕುಂದ ಥಿಯೇಟರ್ ರಸ್ತೆ,
. ಲಿಂಗರಾಜಪುರ ಮೇಲ್ವೇತುವೆ ಮಾರ್ಗ, - ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಲು ಸೂಚನೆ..
- ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನ ಸವಾರರು / ಚಾಲಕರು ಜಿ.ಕೆ.ವಿ.ಕೆ ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶ..
- ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫೈಓವರ್ ಕೆಳಗಡೆ ನೇರವಾಗಿ ಬಿ.ಇ.ಎಲ್ ಸರ್ಕಲ್ ತಲುಪಿ ಎಡತಿರುವು ಪಡೆದು ಸದಾಶಿವನಗರ ಜಂಕ್ಷನ್ನಲ್ಲಿ ಬಲತಿರುವು ಪಡೆದು ಐ.ಐ.ಎಸ್.ಸಿ. ಮೂಲಕ ಸಂಚಾರಕ್ಕೆ ಅವಕಾಶ..
- ಕೆ.ಆರ್.ಪುರಂ, ಹೆಣ್ಣೂರು, ಹೆಚ್.ಆರ್.ಬಿ.ಆರ್.ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಹೋಗಬಯಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆಯನ್ನು ಬಳಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲು ಸಂಚಾರಿ ಪೊಲೀಸ್ ಇಲಾಖೆಯಿಂದ ಮಾಹಿತಿ ಹೊರಡಿಸಲಾಗಿದೆ..
ಟ್ರಾಫಿಕ್ ಕಮ್ಮಿ ಮಾಡ್ಬೇಕು ಅಂತಾ ಈ ಪ್ಲಾನ್ ಏನೋ ಮಾಡ್ತಿದ್ದಾರೆ.. ಇದ್ರಿಂದ ಮುಂದಿನ ನಾಲ್ಕು ತಿಂಗಳು ಕೆ ಆರ್ ಪುರಂ ನಿಂದ ಸಿಟಿ ಕಡೆ ಬರೋ ರೂಟ್ ನಲ್ಲಿ ಮುಂದಿನ ನಾಲ್ಕು ತಿಂಗಳುಗಳ ಟ್ರಾಫಿಕ್ ಇರಲಿದೆ.. ಸೋ ಈ ರೂಟ್ ಗಳಲ್ಲಿ ಓಡಾಡೋರು ಇನ್ಮೇಲೆ ಟ್ರಾಫಿಕ್ ಅನುಭವಿಸೋದು ಕಟ್ಟಿಟ್ಟ ಬುತ್ತಿ.