
ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ದೊಡ್ಮನೆ ಕುಡಿ ಯುವರಾಜ್ ಕುಮಾರ್ ಗೆ ಒಳ್ಳೆ ವೆಲ್ ಕಮ್ ಸಿಕ್ಕಿದೆ. ಯುವ ಸಿನಿಮಾ ಆಕ್ಟಿಂಗ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.ನಟ ಯುವ ರಾಜ್ಕುಮಾರ್ ಅಭಿನಯದ ‘ಯುವ’ ಚಿತ್ರ ಕಳೆದ ಮಾರ್ಚ್ 29ರಂದು ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದ ‘ಯುವ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಯುವ ನಟನೆಯ ಚೊಚ್ಚಲ ಸಿನಿಮಾವನ್ನು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಕಣ್ತುಂಬಿಕೊಂಡಿದ್ದಾರೆ.

ಈ ಸಿನಿಮಾವನ್ನು ನೋಡಿದ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಯುವ ರಾಜ್ಕುಮಾರ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಟ ಕಿಚ್ಚ ಸುದೀಪ್ ಮನೆಯಲ್ಲಿ ಯುವರಾಜ್ ಕುಮಾರ್ ಭೇಟಿ ಕೊಟ್ಟಿದ್ದಾರೆ. ಸುದೀಪ್ ಅವರ ಮನೆಗೆ ಸಂತೋಷ್ ಆನಂದ್ ರಾಮ್ ಹಾಗೂ ಯುವ ಭೇಟಿ ಕೊಟ್ಟಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. 2 ಗಂಟೆಗೂ ಹೆಚ್ಚು ಕಾಲ ಸುದೀಪ್ ಮನೆಯಲ್ಲಿ ಯುವ ಕಾಲ ಕಳೆದಿದ್ದಾರೆ. ಟ್ವೀಟ್ ನಲ್ಲಿ ಯುವ ನಟನೆಯನ್ನ ಕಿಚ್ಚ ಹಾಡಿ ಹೊಗಳಿದ್ದಾರೆ. ಕಿಚ್ಚ-ಯುವ ಫೋಟೋವನ್ನ ನೋಡಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.