ಬೆಂಗಳೂರಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲ್ಲೇ ಬೇಕು ಅನ್ನೋ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ (Congress), ಭಾರೀ ಕಸರತ್ತು ನಡೆಸುತ್ತಿದೆ. ಅದರಲ್ಲೂ ಬೆಂಗಳೂರು ಸೆಂಟ್ರಲ್ (Bangalore Central) ಲೋಕಸಭಾ ಕ್ಷೇತ್ರದಲ್ಲಿ ಮೊನ್ನೆ ಮೊನ್ನೆ ಜೆಡಿಎಸ್ (JDS) ನಾಯಕರು ಹಾಗು ಕಾರ್ಯಕರ್ತರನ್ನು ಸೆಳೆದಿದ್ದ ಸಚಿವ (Minister) ಕೆ.ಜೆ ಜಾರ್ಜ್ (K.J George) ಇದೀಗ ಕೇಸರಿ ಕೋಟೆಗೆ ಲಗ್ಗೆ ಹಾಕಿದ್ದಾರೆ.

ಬಿಜೆಪಿಯ ನೂರಾರು ಯುವ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇಂಧನ ಸಚಿವ ಕೆ.ಜೆ ಜಾರ್ಜ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಸರ್ವಜ್ಞ ನಗರ () ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದ್ದು, ಬಿಜೆಪಿ ಹಲವು ಪ್ರಮುಖ ನಾಯಕರು ಭಾರತೀಯ ಜನತಾ ಪಾರ್ಟಿ ತೊರೆದು ಕೆ.ಜಾರ್ಜ್ ನೇತೃತ್ವದಲ್ಲಿ ಕಾಂಗ್ರೆಸ್ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ (BJP) ಯುವ ಮೋರ್ಚಾ ಅಧ್ಯಕ್ಷ ನವೀನ್, ಹಾಗೂ ಇತರ ಮುಖಂಡರು ನೂರಾರು ಬಿಜೆಪಿ ಕಾರ್ಯಕರ್ತರು ಜೊತೆಗೆ ಇಂಧನ ಸಚಿವರ ನಾಯಕತ್ವದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸೇರಿದ್ದಾರೆ. ಕೆ.ಜೆ ಜಾರ್ಜ್ ಮತ್ತು ಖಾತರಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಣಾ ಜಾರ್ಜ್ ಅವರು ಕಾಂಗ್ರೆಸ್ ಪಕ್ಷದ ಶಾಲು ಹಾಕಿ ನಾಯಕರು, ಕಾರ್ಯಕರ್ತರನ್ನು ಸ್ವಾಗತ ಮಾಡಿಕೊಂಡ್ರು. ಸರ್ವಜ್ಞನಗರ (sarvagnanagar) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠ ಆಗುತ್ತಿದೆ.