ಸ್ಟೈಲಿಶ್ ಸ್ಟಾರ್ (Stylish star) ಅಲ್ಲು ಅರ್ಜುನ್‌ಗೆ (Allu Arjun) ಇಂದು 42ನೇ ಹುಟ್ಟುಹಬ್ಬದ ಸಂಭ್ರಮ.ಈ ಹಿನ್ನೆಲೆ, ತಡರಾತ್ರಿಯೇ ಹೈದರಾಬಾದ್‌ನಲ್ಲಿರುವ(Hyderabad) ಅಲ್ಲು ಅರ್ಜುನ್ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಿದ್ರು. ಹುಟ್ಟುಹಬ್ಬದ ಶುಭಕೋರಲು ಬಂದ ಫ್ಯಾನ್ಸ್ ಅತ್ತ ಅಲ್ಲು ಅರ್ಜುನ್ ಕೈ ಬೀಸ್ತಿದ್ರೆ, ಅತ್ತ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳ ಹರ್ಷೋದ್ರಾರ ಮುಗಿಲು ಮುಟ್ಟಿತ್ತು. ಸದ್ಯ ಇಂದು ಬನ್ನಿ (Banni) ಹುಟ್ಟುಹಬ್ಬದ ದಿನದಂದೇ ಪುಷ್ಪ-2 (Pushpa-2) ಸಿನಿಮಾದ ಟೀಸರ್ ಕೂಡ ರಿಲೀಸ್ ಆಗ್ತಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನಲೆ ತಡರಾತ್ರಿಯೇ ಹೈದರಾಬಾದ್‌ನಲ್ಲಿರುವ ಅಲ್ಲು ಅರ್ಜುನ್ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ಈ ವೇಳೆ ಅಲ್ಲು ಅರ್ಜುನ್, ತಮ್ಮ ನಿವಾಸದ ಮುಂದೆ ನಿಂತು ಫ್ಯಾನ್‌ಗಳತ್ತ ಕೈಬೀಸಿದ್ರು.
ಅಲ್ಲು ನೋಡ್ತಿದ್ದಂತೆ ಫ್ಯಾನ್ಸ್ ಗಳ ಹರ್ಷೋದ್ರಾರ ಮುಗಿಲು ಮುಟ್ಟಿತ್ತು. ಇತ್ತ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾದ ಟೀಸರ್ ಇಂದೇ ರಿಲೀಸ್ ಆಗ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social media) ಪೋಸ್ಟ್ ಮಾಡಿರುವ ಅಲ್ಲು ಅರ್ಜುನ್, ಇಂದು ಬೆಳಿಗ್ಗೆ 11.07ಕ್ಕೆ ಸಿನಿಮಾದ ಟೀಸರ್ ಬಿಡುಗಡೆಯಾಗ್ತಿರೋದಾಗಿ ತಿಳಿಸಿದ್ದಾರೆ. ಸದ್ಯ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಟಿಸಿದ್ದಾರೆ.