ರಾಜ್ಯದಲ್ಲಿ ಲೋಕಸಭಾ ಎಲೆಕ್ಷನ್ ಗೆ ನಾಮಪತ್ರ ಭರಾಟೆ ಜೋರಿದೆ. ವಿವಿಧೆಡೆ ಹಲವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಬೆಂಗಳೂರು ನಾರ್ತ್ ಕ್ಷೇತ್ರದಿಂದ ಕಮಲ ಅಭ್ಯರ್ಥಿ ಶೋಬಾ ಕರಂದ್ಲಾಜೆ ನಾಮಿನೇಷನ್ ಫೈಲ್ ಮಾಡಿದ್ದಾರೆ. ಬೃಹತ್ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನು, ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಇದೇ ವೇಳೆ ಶೋಭಾ ಕರಂದ್ಲಾಜೆ ಆಸ್ತಿ ಬಹಿರಂಗವಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆಸ್ತಿ ವಿವರ ನೋಡೋದಾದ್ರೆ , ಶೋಭಾ ಕರಂದ್ಲಾಜೆ ಒಟ್ಟು 16.02 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.
ಚರಾಸ್ತಿ – 9,23,66,909 ರೂಪಾಯಿ ಮೌಲ್ಯ ,ಸ್ಥಿರಾಸ್ತಿ – 6,78,97,000 ರೂಪಾಯಿ ಮೌಲ್ಯದ್ದಾಗಿದೆ.ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ 4.06 ಕೋಟಿ ರೂಪಾಯಿ ಇದೆ.ಶೋಭಾ ಕರಂದ್ಲಾಜೆ ಬಳಿ 1.kg ಚಿನ್ನದ ಬಿಸ್ಕಟ್,(68.40 ಲಕ್ಷ ಮೌಲ್ಯ)650 ಗ್ರಾಂ ಚಿನ್ನದ ಆಭರಣಗಳಿವೆ.1620 ಗ್ರಾಂ ಬೆಳ್ಳಿ ಆಭರಣ ಹಾಗೂ ಬೆಳ್ಳಿ ವಸ್ತುಗಳು ಇವೆ.ಶೋಭಾ ಕರಂದ್ಲಾಜೆ ಅವರ ವಾರ್ಷಿಕ ಆದಾಯ 2022-23ರಲ್ಲಿ 24.90 ಲಕ್ಷ ರೂಪಾಯಿ ಇದೆ.ಶೋಭಾ ಕರಂದ್ಲಾಜೆ ಬಳಿ ಇರುವ ನಗದು ಹಣ 1,71,000 ರೂಪಾಯಿ,ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇತ್ಯರ್ಥಕ್ಕೆ ಬಾಕಿ ಇವೆಇದರಲ್ಲಿ ಎರಡು ಕ್ರಿಮಿನಲ್ ಕೇಸ್, 1 ಮಾನನಷ್ಟ ಮೊಕದ್ದಮೆ ಅಂತ ಅಫಿಡವಿಟ್ ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ನೇರ ಸವಾಲು..!
ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಸಿಎಂ ಸಿದ್ದರಾಮಯ್ಯ ಸಿಡಿದು ಕೆಂಡವಾಗಿದ್ದಾರೆ. ಅಬಕಾರಿ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಆರೋಪ ಸಾಬೀತು...
Read more