
ಬೆಂಗಳುರೂ: ಉಪಮುಖ್ಯಮಂತ್ರಿ ಡಿಕೆ ಶಿವ ಕುಮಾರ್ ಮತ್ತು ಬಿ ಆರ್ ನಾಯ್ಡು ವಿರುದ್ದ ಹೈಗ್ರೌಂಡ ಪೊಲೀಸರು ಎಫ್ ಐ ಆರ್ ( high ground police station) FIR ದಾಖಲು ಮಾಡಿದ್ದಾರೆ. ಬಿಜೆಪಿಯ ಕಾನೂನು ಪ್ರಕೋಷ್ಟ ಮಾಜಿ ಸಂಚಾಲಕ ಯೋಗೇಂದ್ರ ನೀಡಿದ ದೂರಿನ ಮೇರೆಗೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ನಾನು ಕರಸೇವಕ ನನ್ನನ್ನು ಬಂಧಿಸಿ ಅನ್ನೊ ಅಭಿಯಾನವನ್ನ ಬಿಜೆಪಿ ನಾಯಕರು ರಾಜ್ಯಾದ್ಯಾಂತ ಹಮ್ಮಿಕೊಂಡಿದ್ರು. ಹುಬ್ಬಳ್ಳಿಯಲ್ಲಿ ಕರಸೇವಕ ಒಬ್ಬನನ್ನ ದಶಕಗಳ ನಂತ್ರ ಬಂಧನ ಮಾಡಲಾಗಿತ್ತು.

ಇದು ಕಾಂಗ್ರೇಸ್ ಸರ್ಕಾರ ಉದ್ದೇಶ ಪೂರ್ವಕವಾಗಿ ಬಂಧನ ಮಾಡಿದ್ದಾರೆ. ಹೀಗಾಗಿ ನಾವು ಕೂಡ ಕರಸೇವಕರು, ನಮ್ಮನ್ನು ಬಂಧಿಸಿ ಎಂದು ಪೋಸ್ಟರ್ ಹಿಡಿದು ಬಿಜೆಪಿ (BJP) ಹಲವು ನಾಯಕರು ಪ್ರತಿಭಟನೆ ನಡೆಸಿದ್ರು. ಅದನ್ನು ಡಿಕೆಶಿ ಸೇರಿದಂತೆ ಕಾಂಗ್ರೇಸ್ ನಾಯಕರು ತಿರುಚಿ ಪೋಸ್ಟರ್ ಗಳನ್ನ ಹಾಕಿದ್ರು. ಕಾಂಗ್ರೇಸ್ (Congress post) ತಿರುಚಿದ ಪೋಸ್ಟರ್ ಗಳು ಪೋರ್ಜರಿ ಹಾಗು ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸಲು ಕಾರಣವಾಗಿದೆ ಎಂದು ದೂರು ಸಲ್ಲಿಕೆ ಮಾಡಲಾಗಿತ್ತು.


ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ದೂರು ಸಲ್ಲಿಕೆ ಮಾಡಿದ್ರು. ಅರ್ಜಿ ಪರಿಶೀಲಿಸಿದ ಕೋರ್ಟ್ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಈ ಸಂಬಂಧ ಸದ್ಯ ಪ್ರಕರಣ ದಾಖಲು ಮಾಡಿರುವ ಹೈಗ್ರೌಂಡ ಪೊಲೀಸರು ಉಪಮುಖ್ಯಮಂತ್ರಿಗಳ ವಿರುದ್ದ ಎಫ್ ಐ ಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ..