ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(prahlad joshi) ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ (Dingaleshwara swamiji) ಅಸಮಾಧಾನ ಹಿನ್ನೆಲೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS yediyurappa) ದಿಂಗಾಲೇಶ್ವರ ಸ್ವಾಮೀಜಿಗೆ ಕರೆ ಮಾಡಿ ಮಾತನಾಡಿದ್ದಾರೆ. ಪ್ರಹ್ಲಾದ್ ಜೋಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಶ್ರೀಗಳಿಗೆ ಬಿಎಸ್‌ವೈ ಕರೆ ಮಾಡಿ, ನಿಮ್ಮ ಸಹಕಾರ ನಮಗೆ ಅತ್ಯಗತ್ಯವಿದೆ, ಪ್ರಹ್ಲಾದ್ ಜೋಶಿ ಅವರಾಗಲಿ, ಬೆಂಬಲಿಗರಾಗಲಿ ನಿಮ್ಮ ಮನಸ್ಸು ನೋಯಿಸುವ ಕೆಲಸ ಮಾಡಿಲ್ಲ, ಆ ರೀತಿ ಬಾವಿಸುವುದು ಬೇಡ, ನಿಮ್ಮ ಜೊತೆಗೆ ನಾವಿದ್ದೇವೆ, ಲಿಂಗಾಯತ ಸಮುದಾಯದ ಪರ ನಾವೆಲ್ಲರೂ ಇದ್ದೇವೆ, ನಿಮ್ಮ ಸಹಕಾರ ನಮಗೆ ಮತ್ತು ಪಕ್ಷಕ್ಕೆ ಅತ್ಯಗತ್ಯ ದಯವಿಟ್ಟು ಸಹಕಾರ ನೀಡುವಂತೆ ದೂರವಾಣಿ (Phone call ) ಮೂಲಕ ಮನವಿ ಮಾಡಿದ್ದಾರೆ.

ಕೇಂದ್ರ ಸಚಿವ (central minister) ಪ್ರಹ್ಲಾದ್ ಜೋಶಿ (prahalad joshi) ವಿರುದ್ಧ ಫಕೀರೇಶ್ವರ ಮಠದ ಪೀಠಾಧ್ಯಕ್ಷ ದಿಂಗಾಲೇಶ್ವರ ಶ್ರೀಗಳು (dingaleshwara sri) ವಾಗ್ದಾಳಿ ನಡೆಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಟಿ ವೇಳೆ ಮಾತನಾಡಿದ್ದ ಅವರು, ಜೋಶಿ ಅವರನ್ನು ಮಟ್ಟ ಹಾಕಲು ನಾನೊಬ್ಬನೇ ಸಾಕು. ನಮ್ಮ ವಿರುದ್ದ ಅವ್ರು ಎಲ್ಲಾ ರೀತಿಯ ಶಸ್ತ್ರ ಪ್ರಯೋಗ ಮಾಡ್ತಿದ್ದಾರೆ. ನಾವು ಅವರ ಎಲ್ಲಾ ಶಸ್ತ್ರ ವಿದ್ಯೆಗಳನ್ನು ಎದುರಿಸಲು ಸಮರ್ಥರಿದ್ದೇವೆ. ರಾಜ್ಯದ ಎಷ್ಟು ಸ್ವಾಮೀಜಿಗಳನ್ನು ಬದಲಾವಣೆ ಮಾಡ್ತೀರಿ, ನಿಮಗೆ ಬುದ್ದಿ ಕಲಿಸಲು ನಾನು ಒಬ್ಬನೇ ಸಾಕು. ರಾಜ್ಯದ ಎಲ್ಲಾ ಸಮಾಜದವರು ಜೋಶಿಯವರಿಂದ ನೊಂದಿದ್ದಾರೆ ಅಂತ ಹರಿಹಾಯ್ದಿದ್ದರು.

ಈ ಬಗ್ಗೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ದಿಂಗಾಲೇಶ್ವರ ಸ್ವಾಮೀಜಿ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ ಎಂದು ಭಾವಿಸುತ್ತೇನೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ, ನಾನಾಗಲಿ ನಮ್ಮ ಪಕ್ಷದವರಾಗಲಿ (Bjp) ಯಾರೂ ಅವೊಂದಿಗೆ ಮಾತನಾಡಿಲ್ಲ, ಮಾತಾಡೀ ಪ್ರಶ್ನಿಸಿಲ್ಲ. ಹೀಗಿದ್ದ ಮೇಲೆ ಅವರ ಹೇಳಿಕೆ ಆಶೀರ್ವಾದ ಇದ್ದಂತೆ ಅಂತ ಸಮಾಧಾನವಾಗಿಯೇ ಉತ್ತರಿಸಿ ಸುಮ್ಮನಾಗಿದ್ದರು. ಇದೀಗ ಸ್ವಾಮಿನಿಯವರ ಮನವೊಲಿಕೆಗೆ ಸ್ವತಃ ಬಿ.ಎಸ್.ವೈ ಮುಂದಾಗಿದ್ದಾರೆ.