• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಸರ್ಕಾರದ ನಿರ್ಲಕ್ಷ್ಯದ ಪರಮಾವಧಿ.. KPSC ಸರಿ ಮಾಡಲಾಗದ ಸರ್ಕಾರ..!?

Krishna Mani by Krishna Mani
March 30, 2024
in Uncategorized
0
ಸರ್ಕಾರದ ನಿರ್ಲಕ್ಷ್ಯದ ಪರಮಾವಧಿ.. KPSC ಸರಿ ಮಾಡಲಾಗದ ಸರ್ಕಾರ..!?
Share on WhatsAppShare on FacebookShare on Telegram

ADVERTISEMENT

ಕೆಪಿಎಸ್​ಸಿ (Karnataka Public Service Commission)ನಲ್ಲಿ ಸಾಕಷ್ಟು ಗೊಂದಲಕಾರಿ ಘಟನೆಗಳು ನಡೆಯುತ್ತಲೇ ಇವೆ. ಕಾರ್ಯದರ್ಶಿ ವಿಚಾರದಲ್ಲೂ ಗೊಂದಲ ಉಂಟಾಗಿತ್ತು. ಕೆ.ಎಸ್​ ಲತಾಕುಮಾರಿಗೆ 10 ದಿನ ರಜೆ ಮೇಲೆ ಕಳುಹಿಸಿದ್ದ ಸರ್ಕಾರ, ಆ ಬಳಿಕ ಏಕಏಕಿ ವರ್ಗಾವಣೆ ಮಾಡಿತ್ತು. ಕೆಪಿಎಸ್​ಸಿ ಅಧ್ಯಕ್ಷರು ಹಾಗು ಸದಸ್ಯರ ಒತ್ತಡದಿಂದಲೇ ಸರ್ಕಾರ ಇದನ್ನೆಲ್ಲಾ ಮಾಡುತ್ತಿದೆ. ಅಕ್ರಮಕ್ಕೆ ಸರ್ಕಾರ ಸಾಥ್​ ಕೊಡ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಕೆಪಿಎಸ್​ಸಿಯಲ್ಲಿ ಅಂತಿಮ ಆಯ್ಕೆ ಪಟ್ಟಿಯೇ ನಾಪತ್ತೆ ಆಗಿದೆ ಎಂದು ದೂರು ದಾಖಲಾಗಿದೆ.

ಕೆಪಿಎಸ್​ಸಿ ನೇಮಕಾತಿ ಅಂದ್ರೆ ಗಜಪ್ರಸವ ಎನ್ನುವಂತೆ ಆಗುತ್ತದೆ ಎಂದು ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವ ಆಕಾಂಕ್ಷಿಗಳು ಆರೋಪಿಸುತ್ತಾರೆ. ಇದೀಗ ಕೆಪಿಎಸ್​ಸಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ ಆಗಿದೆ. ಆಯ್ಕೆ ಪಟ್ಟಿ ನಾಪತ್ತೆ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಕೆಪಿಎಸ್​ಸಿ ಅಧಿಕಾರಿ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. 2016ರಲ್ಲಿ ನಡೆದ ಕೊಳಗೇರಿ‌ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಹಾಗು 2018 ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆಕಾಂಕ್ಷಿ. ಆ ಬಳಿಕ ಹೈಕೋರ್ಟ್ ಆದೇಶದಂತೆ ಆಯ್ಕೆ ಪಟ್ಟಿ ತಯಾರಿ ಮಾಡಲಾಗಿತ್ತು. ಇದೀಗ ಆ ಪಟ್ಟಿಯೇ ನಾಪತ್ತೆ ಆಗಿದೆ.

ಕೆಪಿಎಸ್​ಸಿ ಗೌಪ್ಯ ಘಟಕ -3 ರಲ್ಲಿ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಜನವರಿ 22 ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಿದ್ದಾರೆ. ಆ ಬಳಿಕ ಕಡತ ನಾಪತ್ತೆ ಆಗಿದೆ ಎಂದು ದೂರು ಸಲ್ಲಿಸಲಾಗಿದೆ. ಕೆಪಿಎಸ್​ಸಿಯ‌ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ಕಾರ್ಯ ನಡೆಸಲಾಗಿದೆ. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2 ಕ್ಕೆ‌ ಹಿಂದಿರುಗಿಸುವಂತೆ ಜ್ಞಾಪನ ಪತ್ರ ಕೂಡ ಹೊರಡಿಸಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಕಡತಕ್ಕಾಗಿ ಅಧಿಕಾರಿಗಳು ಹಾಗು ಸಿಬ್ಬಂದಿ ಶೋಧ ನಡೆಸಿದ ಬಳಿಕ ದೂರು ಎಂದು ಉಲ್ಲೇಖ. ಕಡತ ನಾಪತ್ತೆ ಬಗ್ಗೆ ದೂರು ದಾಖಲಿಸಲು ಆಯೋಗದ ಸಭೆಯಲ್ಲಿ ನಿರ್ಧಾರ ಮಾಡಿ ದೂರು ನೀಡಿದ್ದೇವೆ ಎನ್ನಲಾಗಿದೆ.

ಕೆಪಿಎಸ್​ಸಿ ಸಹಾಯಕ ಕಾರ್ಯದರ್ಶಿ ದೂರು ನೀಡಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ವಿಭಾಗ ಡಿಸಿಪಿ ಶೇಖರ್, ಕಡತ ನಾಪತ್ತೆ ಬಗ್ಗೆ ಕೆಪಿಎಸ್​ಸಿ ಕಾರ್ಯದರ್ಶಿ ದೂರು ಕೊಟ್ಟಿದ್ದಾರೆ. ಆಯೋಗದಲ್ಲಿ ಕಡತ ನಾಪತ್ತೆಯಾಗಿತ್ತು. 2016ರಲ್ಲಿ ಕೊಳಗೇರಿ ಮಂಡಳಿ JE ಸಿವಿಲ್ ನೇಮಕಾತಿ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಆಗಿತ್ತು. ಇದನ್ನ ಪ್ರಶ್ನಿಸಿ ಅಭ್ಯರ್ಥಿಯೊಬ್ಬರು ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ರು. ಹೈಕೋರ್ಟ್ ಆದೇಶ ಪಾಲನೆಗೆ ಆಯ್ಕೆ ಪಟ್ಟಿ ಸಿದ್ದವಾಗಿತ್ತು. ನಂತರ ಕಾರ್ಯದರ್ಶಿ ಕಚೇರಿಯಲ್ಲಿ ಕಡತ ಸ್ವೀಕಾರಗೊಂಡಿದೆ. ಆ ನಂತರ ಆ ಕಡತ ನಾಪತ್ತೆಯಾಗಿತ್ತು. ಸದ್ಯಕ್ಕೆ ಗುಮಾನಿ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ನಾವು ಎಲ್ಲಾ ಮಾಹಿತಿ ಕೇಳಿದ್ದೇವೆ, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಕೆಪಿಎಸ್​ಸಿ ಮೂಲಕ ಕೆಲಸ ತೆಗೆದುಕೊಳ್ಳುವುದು ಎಂದರೆ ಬಿಳಿಯಾಣೆಯನ್ನು ಸಾಕಿದಂತೆ ಅನ್ನೋ ಮಾತು ಜನಜನಿತವಾಗಿದೆ. ರಾಜಕಾರಣಿಗಳೂ ಈ ಭ್ರಷ್ಟಾಚಾರದ ಪ್ರಮುಖ ಪಾತ್ರಧಾರಿಗಳು ಎನ್ನಲಾಗುತ್ತದೆ. ಅಲ್ಲಿಗೆ ನೇಮಕವಾಗುವ ಅಧ್ಯಕ್ಷರು, ಸದಸ್ಯರ ಮೇಲೂ ಒಳ್ಳೆಯ ಮಾತುಗಳು ಕೇಳಿ ಬರುವುದಿಲ್ಲ. ಇನ್ನು ನೇಮಕಾತಿ ವಿಳಂಬದ ಬಗ್ಗೆ ಪದೇ ಪದೇ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಯಾರೇ ಅಧಿಕಾರಕ್ಕೆ ಬಂದರು ಕೆಪಿಎಸ್​ಸಿ ಕರ್ಮಕಾಂಡ ಸರಿ ಮಾಡುವ ಮನಸ್ಸು ಮಾಡುವುದಿಲ್ಲ ಎನ್ನುವ ಬೇಸರ ಆಕಾಂಕ್ಷಿಗಳಲ್ಲಿ. ಇದೀಗ ನೇಮಕಾತಿ ಪಟ್ಟಿಯೇ ನಾಪತ್ತೆ ಎಂದರೆ ಎಷ್ಟರ ಮಟ್ಟಿಗೆ ಆಡಳಿತ ನಡೆಯುತ್ತಿದೆ ಎನ್ನುವುದನ್ನು ಸರಳವಾಗಿ ಊಹೆ ಮಾಡಬಹುದಾಗಿದೆ.

Tags: BJPCongress Partykpseಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಕೋಲಾರ ನಗರ ಕಾಂಗ್ರೆಸ್ ಟಿಕೆಟ್ ಯಾರಿಗೆ ಅನ್ನೋ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ

Next Post

ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಇಲ್ಲ.. ಅದಕ್ಕೆ ಮಿನಿಸ್ಟರ್ ಸಂಬಂಧಿಕರಿಗೆ ಟಿಕೆಟ್ ಕೊಟ್ಟಿದ್ದಾರೆ : ಬಸವರಾಜ ಬೊಮ್ಮಾಯಿ

Related Posts

ಡಿಕೆ ಶಿವಕುಮಾರ್ ಪರ ಘೋಷಣೆ ಜೋರಾಗಿದೆ: ಬೆಂಬಲಿಗರ ಸಂಭ್ರಮ, ಹೈಕಮಾಂಡ್‌ನಿಂದ ಎಚ್ಚರಿಕೆ!
Uncategorized

ಡಿಕೆ ಶಿವಕುಮಾರ್ ಪರ ಘೋಷಣೆ ಜೋರಾಗಿದೆ: ಬೆಂಬಲಿಗರ ಸಂಭ್ರಮ, ಹೈಕಮಾಂಡ್‌ನಿಂದ ಎಚ್ಚರಿಕೆ!

by ಪ್ರತಿಧ್ವನಿ
May 27, 2026
0

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿ‌ ಕೆ‌‌ ಶಿವಕುಮಾರ್ ಅವರ ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಸಿಎಂ ಸ್ಥಾನಕ್ಕೆ...

Read moreDetails
B‌REAKING NEWS : ಎಲ್ಲವೂ ಊಹಾಪೋಹ, ಎಲ್ಲಾ ಸುಳ್ಳು : ಸಭೆ ಬಳಿಕ ವೇಣುಗೋಪಾಲ್‌ ಫಸ್ಟ್‌ ರಿಯಾಕ್ಷನ್..!

B‌REAKING NEWS : ಎಲ್ಲವೂ ಊಹಾಪೋಹ, ಎಲ್ಲಾ ಸುಳ್ಳು : ಸಭೆ ಬಳಿಕ ವೇಣುಗೋಪಾಲ್‌ ಫಸ್ಟ್‌ ರಿಯಾಕ್ಷನ್..!

May 26, 2026
ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

May 22, 2026
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
Next Post
ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಇಲ್ಲ.. ಅದಕ್ಕೆ ಮಿನಿಸ್ಟರ್ ಸಂಬಂಧಿಕರಿಗೆ ಟಿಕೆಟ್ ಕೊಟ್ಟಿದ್ದಾರೆ : ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಇಲ್ಲ.. ಅದಕ್ಕೆ ಮಿನಿಸ್ಟರ್ ಸಂಬಂಧಿಕರಿಗೆ ಟಿಕೆಟ್ ಕೊಟ್ಟಿದ್ದಾರೆ : ಬಸವರಾಜ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada