ಚಿತ್ರದುರ್ಗ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಶಾಸಕ ಚಂದ್ರಪ್ಪ ಪುತ್ರ ರಘು ಚಂದನ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬಿಜೆಪಿ ವರಿಷ್ಠರ ವಿರುದ್ದ ರಘು ಚಂದನ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ SG ಕನ್ವೆನ್ಷನ್ ಹಾಲ್‌ನಲ್ಲಿ ಸ್ವಾಭಿಮಾನಿ ಹೆಸರಲ್ಲಿ ಕಾರ್ಯಕರ್ತರ ಸಭೆ ನಡೆಸಿದ, ರಘು ಚಂದನ್ ಬಿಜೆಪಿ ನಾಯಕರ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ. ಸಭೆ ಬಳಿಕ ಮಾತನಾಡಿದ ಶಾಸಕ ಎಂ.ಚಂದ್ರಪ್ಪ, 8 ಕ್ಷೇತ್ರಗಳ ಕಾರ್ಯಕರ್ತರು ನಮಗೆ ಬೆಂಬಲ ಕೊಟ್ಟಿದ್ದಾರೆ. ಏಪ್ರಿಲ್ 3ನೇ ತಾರೀಕು ನಾವು ನಾಮಿನೇಷನ್ ಮಾಡೋದು ಪಕ್ಕಾ ಅಂತ ಹೇಳಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಚಿತ್ರದುರ್ಗಕ್ಕೆ ಎಂಟ್ರಿಕೊಟ್ಟ ಕಾರಜೋಳಗೆ ಬೆಂಬಲಿಗರಿಂದ ಬಿಸಿ ಮುಟ್ಟಿದೆ.

ಚಿತ್ರದುರ್ಗ ಟಿಕೆಟ್ ಘೋಷಣೆ ಬಳಿಕ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ. ಚಿತ್ರದುರ್ಗ ನಗರಕ್ಕೆ ಬರುತ್ತಿದ್ದಂತೆ ರಸ್ತೆ ತಡೆದು, ರಘುಚಂದನ್ ಬೆಂಬಲಿತ ಕಾರ್ಯಕರ್ತರು ಗೋವಿಂದ ಕಾರಜೋಳ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದ್ರು. ಈ ವೇಳೆ ಕಾರ್ಯಕರ್ತರು ಜಮಾಯಿಸಿದ್ದನ್ನು ಕಂಡು ಗಾಡಿ ನಿಲ್ಲಿಸದೆ ಗೋವಿಂದ ಕಾರಜೋಳ ಹೆದ್ದಾರಿಯಲ್ಲೇ ಎಸ್ಕೇಪ್ ಆದ್ರು. ನಂತರ ಪೊಲೀಸ್ ಸರ್ಪಗಾವಲಿನಲ್ಲಿ BJP ಕಚೇರಿಗೆ ಕಾರಜೋಳ ಆಗಮಿಸಿದ್ರು. ಅಲ್ಲಿಗೂ ಬಂದ ರಘುಚಂದನ್ ಬೆಂಬಲಿಗರು, ಕಚೇರಿಗೆ ನುಗ್ಗಿ ಗೋ ಬ್ಯಾಕ್ ಕಾರಜೋಳ ಘೋಷಣೆ ಕೂಗಿದ್ರು. ಕೂಡಲೇ ಎಚ್ಚೆತ್ತ ಪೊಲೀಸರು, ಬೆಂಬಲಿಗರನ್ನ ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದರು
ಚಿತ್ರದುರ್ಗಕ್ಕೆ ಶುಕ್ರವಾರ ಸಂಜೆ ಎಂಟ್ರಿ ಕೊಡ್ತಿದ್ದ ಹಾಗೆ BJP ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ಧ ಆಕ್ರೋಶ ಹೊರಬಿದ್ದಿದೆ. ಚಿತ್ರದುರ್ಗ ಪ್ರವೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ತೀರ್ಮಾನದಂತೆ ನಾನು ಚಿತ್ರದುರ್ಗಕ್ಕೆ ಬಂದಿರುವೆ. ಕೋರ್ ಕಮಿಟಿ ಸಭೆಯಲ್ಲಿ ನನ್ನ ಹೆಸರು ಪೈನಲ್ ಆಗಿತ್ತು. ಈ ಎಲ್ಲಾ ಬೆಳವಣಿಗೆ ಕುರಿತು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಚಿತ್ರದುರ್ಗದಿಂದ ದೆಹಲಿಯವರೆಗೂ ಎಲ್ಲರೂ ಶಿಪ್ಪಾರಸ್ಸು ಮಾಡಿದ್ದಾರೆ. ಯಡಿಯೂರಪ್ಪ ಅವರು ಆ ರೀತಿಯಲ್ಲಿ ಮಾತನಾಡಲ್ಲ.. ಸಂಸತ್ ಸದಸ್ಯ ಎ.ನಾರಾಯಣ ಸ್ವಾಮಿ ನಿಲ್ಲೋದಿಲ್ಲ ಎಂದಿದ್ದರು. ಹಾಗಾಗಿ ನಾನು ಸ್ಪರ್ಧೆ ಮಾಡುವ ಅನಿವಾರ್ಯ ಬಂದಿದೆ ಎಂದಿದ್ದಾರೆ. ಇನ್ನು ಇದೇ ವೇಳೆ ಮೊಟ್ಟೆ, ಕಪ್ಪು ಬಟ್ಟೆಯನ್ನು ರಘು ಚಂದನ್ ಆಪ್ತರ ಕಾರಿನಲ್ಲಿ ವಶಕ್ಕೆ ಪಡೆಯಲಾಗಿದೆ.
ಎಲ್ಲಾ ಹಿರಿಯರು, ಮಾಜಿ ಶಾಸಕರು, ಕೋರ್ ಕಮಿಟಿ ಸದಸ್ಯರನ್ನ ಕರೆದು ಕೇಳಿದ್ದಾರೆ. ರಾಜ್ಯ ಚುನಾವಣಾ ಸಮಿತಿ ನನ್ನ ಹೆಸರು ಶಿಫಾರಸ್ಸು ಮಾಡಿದ್ದರು. ಹೈಕಮಾಂಡ್ ಸೂಚನೆಯನ್ನು ನಾನು ಪಾಲಿಸುತ್ತಿದ್ದೇನೆ. ಪಕ್ಷವನ್ನ ತಾಯಿಯ ಸ್ಥಾನದಲ್ಲಿ ನಾನು ನೋಡಿದವನು. ಪಕ್ಷದ ಆದೇಶ ಧಿಕ್ಕರಿಸುವ ಮನಸ್ಸು ನನಗಿಲ್ಲ. ಪಕ್ಷದ ಎಲ್ಲರೂ ಕೂಡಾ ಚುನಾವಣಾ ಪ್ರಕ್ರಿಯೆ ಆರಂಭ ಮಾಡುತ್ತಾರೆ. ರಾಜ್ಯದ 28 ಸ್ಥಾನವನ್ನೂ ನಾವು ಗೆಲ್ಲುತ್ತೇವೆ. ಬಿಜೆಪಿ ಜೊತೆ ಜೆಡಿಎಸ್ ಕೂಡ ಮೈತ್ರಿ ಆಗಿದೆ. ಹಾಲು – ಜೇನಿನಂತೆ ನಾನು ಕೆಲಸ ಮಾಡುತ್ತೇವೆ. ಎರಡು ಪಕ್ಷದ ನಾಯಕರು ಅಣ್ಣ ತಮ್ಮಂದಿರಂತೆ ಚುನಾವಣೆ ಮಾಡಿ ಎಂದು ದೇವೆಗೌಡರು ಸೂಚಿಸಿದ್ದಾರೆ ಎಂದಿದ್ದಾರೆ.
ಆದ್ರೆ ಟಿಕೆಟ್ ವಂಚಿತ ರಘು ಚಂದನ್ ಬೆಂಬಲಿಗರು ಕಾರಜೋಳಗೆ ಮೊಟ್ಟೆ ಹೊಡೆದು ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದರು ಎನ್ನುವುದು ಬಯಲಾಗಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಗೋವಿಂದ ಕಾರಜೋಳ ಮೇಲೆ ಮೊಟ್ಟೆ ಎಸೆಯಲು ಪ್ರಯತ್ನ ನಡೆದಿದ್ದು, ಕಾರಜೋಳಗೆ ಮುತ್ತಿಗೆ ಹಾಕ್ತಿದ್ದ ಹಾಗೆ ಪೊಲೀಸರು ಅಲರ್ಟ್ ಆಗಿದ್ದಾರೆ. ರಘು ಚಂದನ್ ಬೆಂಬಲಿಗರ ಕಾರಲ್ಲಿದ್ದ ಮೊಟ್ಟೆ, ಕಪ್ಪು ಬಾವುಟ ವಶಕ್ಕೆ ಪಡೆದಿದ್ದಾರೆ. ಕಪ್ಪು ಬಾವುಟ ತೋರಿಸಿ ಘೇರಾವ್ ಹಾಕಲು ಪ್ಲಾನ್ ನಡೆದಿತ್ತು ಎನ್ನಲಾಗಿದೆ. ಒಟ್ಟಾರೆ ಕಾಂಗ್ರೆಸ್‌ಗೆ ಕೋಲಾರ ಬಿಸಿ ತುಪ್ಪ ಆಗಿದ್ರೆ, ಅತ್ತ ಬಿಜೆಪಿಗೆ ಚಿತ್ರದುರ್ಗ ಅಗ್ನಿ ಕುಂಡ ಆಗಿದೆ ಅನ್ನಬಹುದು.
ಕೃಷ್ಣಮಣಿ





