2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಈಗಾಗ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಹುರಿಯಾಳುಗಳು ನಾಮಿನೇಷನ್ ಫೈಲ್ ಮಾಡ್ತಿದ್ದಾರೆ. ಇದರ ಮಧ್ಯೆಯೇ ಕೇಸರಿಪಾಳಯದಲ್ಲಿ ಹೊಸ ಸಮಸ್ಯೆ ಉದ್ಭವವಾಗಿದೆ. ನಾಮಿನೇಷನ್ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವ್ರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ನಾಮಪತ್ರ ಸಲ್ಲಿಕೆ ವೇಳೆ ಬರುವಂತೆ ಕೇಸರಿ ಅಭ್ಯರ್ಥಿಗಳು ಮುಗಿಬಿದ್ದಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವಾಗ ಬಿ.ಎಸ್. ಯಡಿಯೂರಪ್ಪ ಜೊತೆಗಿರಬೇಕೆಂದು ಒತ್ತಾಯ ಮಾಡ್ತಿದ್ದಾರೆ.ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಮೈಸೂರು-ಕೊಡಗು, ತುಮಕೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ ಹೀಗೆ ಹಲವು ಕ್ಷೇತ್ರಗಳ ಅಭ್ಯರ್ಥಿಗಳಿಂದ ಒಂದೇ ದಿನ ನಾಮಪತ್ರ ಸಲ್ಲಿಕೆ ಮಾಡ್ತಿದ್ದಾರೆ.ಏಪ್ರಿಲ್ 3 ರಂದು ದಿನ ಚೆನ್ನಾಗಿ ಇರುವ ಕಾರಣ.ಅಂದೇ ನಾಮಪತ್ರ ಸಲ್ಲಿಕೆಗೆ ಮುಂದಾಗಿರುವ ಅಭ್ಯರ್ಥಿಗಳು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಇನ್ನು ನಾಮಪತ್ರ ಸಲ್ಲಿಕೆಗೆ ಬಿ.ಎಸ್. ಯಡಿಯೂರಪ್ಪ ಹಾಜರಿರಬೇಕೆಂದು ಅಭ್ಯರ್ಥಿಗಳ ಇರಾದೆ ಇದೆ.ಒಂದೇ ದಿನವೇ ಎಲ್ಲರೂ ನಾಮಪತ್ರ ಸಲ್ಲಿಕೆ ಅಂದರೆ ಹೇಗೆ?ಎಲ್ಲಿಗೆ ಬರುವುದು? ಎಲ್ಲಿಗೆ ಬಿಡುವುದು? ಎಂದು ಬಿ.ಎಸ್. ಯಡಿಯೂರಪ್ಪ ಗೊಂದಲಕ್ಕೀಡಾಗಿದ್ದಾರೆ.ಏಪ್ರಿಲ್ 3 ರಂದು ಶೋಭನನಾಮ ಸಂವತ್ಸರದ ಉತ್ತರಾಯಣದ ಪಾಲ್ಗುಣ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ.ಉತ್ತರ ಆಷಾಢ ನಕ್ಷತ್ರ, ರಾಹುಕಾಲ 12 ಘಂಟೆಯಿಂದ 1:30 ರವರೆಗೆ.ರಾಹುಕಾಲದ ಸಮಯ ಬಿಟ್ಟು, ಅಂದು ನಾಮಪತ್ರ ಸಲ್ಲಿಕೆ ಮಾಡಿದ್ರೆ, ಎದುರಾಳಿಗಳ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ನಂಬಿಕೆ ಇದೆ.ಹೀಗಾಗಿ, ಅಂದೇ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ.ಎಲ್ಲರೂ ಒಂದೇ ದಿನ ಅಂದರೆ ಕಷ್ಟ. ಬೇರೆ ಬೇರೆ ದಿನಗಳಲ್ಲಿ ನೋಡಿ ಮುಹೂರ್ತ ನಿಗದಿಪಡಿಸಿಕೊಳ್ಳಿ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ.