2024 ರ ಲೋಕಸಭಾ ಕ್ಷೇತ್ರದ ಚುನಾವಣೆ ವಿಚಾರ.
ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ ಪಂಚಮಸಾಲಿ ಸಮಾಜ?
ಈ ಬಾರಿಯ ಚುನಾವಣೆಯಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಬಿಜೆಪಿ ವಿರುದ್ಧ ದನಿ ಎತ್ತಿ ಸೆಡ್ಡು ಹೊಡೆಯಲು ತೆರೆಮರೆಯಲ್ಲಿ ವೇದಿಕೆಯಲ್ಲಿ ಸಿದ್ಧಪಡಿಅಉತ್ತಿರುವ ಪಂಚಮಸಾಲಿ ಸಮಾಜ.
“ಪ್ರತಿಧ್ವನಿ”ಗೆ ಪಂಚಮಸಾಲಿ ಸಮಾಜದ ಉನ್ನತ ಮೂಲಗಳಿಂದಲೇ ಮಾಹಿತಿ ಲಭ್ಯ.
ಅಷ್ಟಕ್ಕೂ ಪಂಚಮಸಾಲಿ ಸಮಾಜ ಬಿಜೆಪಿಯ ಜೊತೆಗಿದ್ದು ಈಗ ಸೆಡ್ಡು ಹೊಡೆಯಲು ಮುಂದಾಗಿರುವುದೇಕೆ?

- ರಾಜ್ಯದಲ್ಲಿ ವೀರಶೈವ- ಲಿಂಗಾಯತ ಸಮುದಾಯದ ಅತಿ ದೊಡ್ಡ ಒಳಪಂಗಡ ಅಂದರೆ ಅದು ಪಂಚಮಸಾಲಿ ಸಮಾಜ.
- ಈ ಬಾರಿ ಪಂಚಮಸಾಲಿ ಸಮಾಜ ಬಿಜೆಪಿ ಬಳಿ ಕೇಳಿದ್ದು ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ಟಿಕೆಟ್.
- ಸುಮಾರು 15 ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮಾಜದ ಮತಗಳು ಅತಿ ಹೆಚ್ಚು ಪ್ರಮಾಣದಲ್ಲಿದೆ.
- ಹೀಗಾಗಿ, ನಮಗೆ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ನೀವು ಅವಕಾಶ ಕಲ್ಪಿಸಬೇಕೆಂದಿದ್ದ ಪಂಚಮಸಾಲಿ ಸಮಾಜ.
- ಹರಿಹರ ಪೀಠದ ವಚನಾನಂದ ಶ್ರೀಗಳು ಹಾಗೂ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಪ್ರತ್ಯೇಕವಾಗಿ ಈ ವಿಚಾರವನ್ನು ಬಿಜೆಪಿಯ ನಾಯಕರಿಗೆ ತಿಳಿಸಿದ್ರು.
- ಆದ್ರೆ ಟಿಕೆಟ್ ಘೋಷಣೆ ವೇಳೆಯಲ್ಲಿ ಕೇವಲ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಪಂಚಮಸಾಲಿ ಸಮಾಜದ ಅಭ್ಯರ್ಥಿಗೆ ಮಣೆ ಹಾಕಲಾಗಿದೆ.
- ಬೆಳಗಾವಿ ಕ್ಷೇತ್ರದ ಬೇಡಿಕೆಯನ್ನು ಪಂಚಮಸಾಲಿ ಸಮಾಜ ಇಟ್ಟಿದ್ದು, ಅಲ್ಲಿ ಈಗ ಬಣಜಿಗರಿಗೆ ಮಣೆ ಹಾಕಲಾಗಿದೆ.
- ಬಿಜೆಪಿಯಲ್ಲಿ ವೀರಶೈವ- ಲಿಂಗಾಯತರನ್ನು ಕಡೆಗಣಿಸಿದ್ದು ಅದರಲ್ಲೂ ಪ್ರಮುಖವಾಗಿ ಪಂಚಮಸಾಲಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಅಸಮಾಧಾನಗೊಂಡಿದೆ ಸಮಾಜ.
- ಹೀಗಾಗಿ, ಇಡೀ ಪಂಚಮಸಾಲಿ ಸಮಾಜ ಒಂದಾಗಿ ಬಿಜೆಪಿ ವಿರುದ್ಧ ಈ ಬಾರಿಯ ಚುನಾವಣೆಯಲ್ಲಿ ಕೆಲಸ ಮಾಡುವ ನಿರ್ಣಯಕ್ಕೆ ಬಂದಿದೆ ಎಂಬ ಮಾಹಿತಿ “ಪ್ರತಿಧ್ವನಿ”ಗೆ ಲಭ್ಯವಾಗಿದೆ.
- ಇನ್ನೊಂದು ಪ್ರಮುಖ ವಿಚಾರ ಅಂದರೆ, ಈ ಬಾರಿ ಬಿಜೆಪಿ ತುಮಕೂರು, ದಾವಣಗೆರೆ, ಹಾವೇರಿ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬೀದರ್, ಕೊಪ್ಪಳ, ಶಿವಮೊಗ್ಗ ಹೀಗೆ 9 ಕ್ಷೇತ್ರಗಳಲ್ಲಿ ವೀರಶೈವ- ಲಿಂಗಾಯತ ಸಮಾಜದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು, ಇದರಲ್ಲಿ 4 ಬಣಜಿಗ, 2 ಸಾದರ, 1 ಪಂಚಮಸಾಲಿ, 1 ಶೆಟ್ಟಿ, 1 ಗಾಣಿಗ. ಒಟ್ಟು 9 ಅಭ್ಯರ್ಥಿಗಳ ಪೈಕಿ 1 ಪಂಚಮಸಾಲಿ ಸಮಾಜಕ್ಕೆ ನೀಡಲಾಗಿದೆ.
- ಇತ್ತ ಕಾಂಗ್ರೆಸ್ 5 ಮಂದಿ ವೀರಶೈವ-ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಬೀದರ್ ಹಾಗೂ ದಾವಣಗೆರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇದರಲ್ಲಿ 2 ಪಂಚಮಸಾಲಿ, 1 ಜಂಗಮ, 1 ಬಣಜಿಗ, 1 ಸಾದರ ಸಮಾಜಕ್ಕೆ ನೀಡಿದ್ದು, ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ಪಂಚಮಸಾಲಿ ಸಮಾಜ ಹೇಳುತ್ತಿದೆ.
- ಬಿಜೆಪಿ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 1 ಪಂಚಮಸಾಲಿ ಸಮಾಜಕ್ಕೆ, ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 2 ಪಂಚಮಸಾಲಿ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ನ್ಯಾಯದ ಪರವಾಗಿದ್ದು, ಇದನ್ನೇ ಪಂಚಮಸಾಲಿಗಳು ಅಸ್ತ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಹೀಗೆ ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯ ಅಖಾಡದಲ್ಲಿ ಒಂದು ಸಮಾಜವೇ ಬಿಜೆಪಿಗೆ ಸೆಡ್ಡು ಹೊಡೆಯುತ್ತಾ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.