100 ರೂಪಾಯಿಯ(100rs note) ಹಳೆ ನೋಟುಗಳು ಸಧ್ಯದಲ್ಲೇ ಬ್ಯಾನ್ (Ban) ಆಗಲಿದೆ, ಬೇಗ ಬೇಗ ಬ್ಯಾಂಕ್ ಗಳಿಗೆ ನಿಮ್ಮ ಹಳೆ ನೋಟುಗಳನ್ನ ವಾಪಸ್ ಮಾಡಿ ಎಂಬ ಮೆಸೇಜ್ ವಾಟ್ಸಾಪ್ (Whatsapp message) ಮತ್ತು ಉಳಿದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಜನರನ್ನ ಗೊಂದಲಕ್ಕೀಡು ಮಾಡಿದೆ. ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve bank of India) 2000 /- ಮುಖಬೆಲೆಯ ನೋಟುಗಳನ್ನ ಬ್ಯಾಂಕ್ ಗೆ ಹಿಂದಿರುಗಿಸಲು ಕೊನೆಯ ಅವಕಾಶ ನೀಡಿತ್ತು !
2017ರ ನವೆಂಬರ್(November 2017) ನಲ್ಲಿ ಕೇಂದ್ರ ಸರ್ಕಾರ ೫೦೦ (500rs) ಮತ್ತು ೧೦೦೦ ರೂಪಾಯಿ (1000rs) ನೋಟುಗಳನ್ನ ಅಮ್ಮನ್ಯೀಕರಣಗೊಳಿಸಿ ಆದೇಶ ಹೊರಡಿಸಿತ್ತು. ಆ ಸಂದರ್ಭದಲ್ಲಿ ಇದಕ್ಕೆ ಪರ್ಯಾಯವಾಗಿ ೧೦೦(100rs) , ೨೦೦ (200rs) ಮತ್ತು ೫೦೦ (500rs) ಮುಖಬೆಲೆಯ ಹೊಸ ನೋಟುಗಳನ್ನ ಜಾರಿಗೊಳಿಸಿತ್ತು. ನಂತರ ಮತ್ತೆ ಕೇಂದ್ರ ಸರ್ಕಾರ ಹಾಗೂ RBI ೨೦೦೦ ರೂಪಾಯಿ ನೋಟುಗಳನ್ನ ban ಮಾಡಿತ್ತು. ಇದೀಗ ಅದೇ ರೀತಿ ಮತ್ತೆ 100 ರೂಪಾಯಿ ಹಳೆ ನೋಟುಗಳು ಬ್ಯಾನ್ ಆಗಿಲಿದೆ ಎಂಬ ಸುದ್ದಿ ಹರಿದಾಡ್ತಿದೆ.
ನೂರರ ಮುಖಬೆಲೆ ನೋಟು ಮಾರ್ಚ್ 31ರ (March 31st) ವರೆಗೆ ಮಾತ್ರ ಬಳಸಬಹುದು ಆ ನಂತರ ಮತ್ತೆ ಬಳಸಬಾರದು ಎಂದು ಸುಳ್ ಸುದ್ದಿ ಹಬ್ಬಿಸಲಾಗಿತ್ತು. ಹೀಗಾಗಿ ಜನರು ತಮ್ಮ ಹಳೆ ನೂರು ರೂಪಾಯಿ ನೋಟು ಹಿಂದಕ್ಕೆ ಹಿಂದಿರುಗಿಸಲು ಬ್ಯಾಂಕಿನ(Bank) ಮೊರೆ ಹೋಗುವ ಅಗತ್ಯ ಇಲ್ಲ ಎಂದು ಸಹ ಇದೇ ವೇಳೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve bank of India) ಹೇಳಿದೆ.ಆ ಮೂಲಕ ನೂರು ರೂಪಾಯಿಯ ಹೊಸ ಮತ್ತು ಹಳೆಯ ಎರಡು ನೋಟುಗಳೂ ಕೂಡ ಚಾಲ್ತಿಯಲ್ಲಿ ಇರಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.