ರೀಲ್ಸ್ ರಾಣಿ ಸೋನುಗೌಡರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ . 8 ವರ್ಷದ ಬಾಲಕಿಯನ್ನು ದತ್ತು ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘಿಸಿರುವ ಆರೋಪದ ಮೇಲೆ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಮಾಡಿರುವ ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ರಾಯಚೂರು ಮೂಲದ 8 ವರ್ಷದ ಬಾಲಕಿಯನ್ನು ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡ ದತ್ತು ಪಡೆದುಕೊಂಡಿದ್ದಾರೆ.
ಹೀಗಾಗಿ ಮಗುವನ್ನ ಕರೆ ತಂದು ತನ್ನ ಜೊತೆ ಇಟ್ಟುಕೊಂಡಿದ್ದರು. ಈ ವೇಳೆ ಕಾನೂನು ಉಲ್ಲಂಘಿಸಿರುವ ಆರೋಪ ಇರುವುದರಿಂದ ಸೋನುಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ. ಅಲ್ಲದೇ ಮಗುವಿನ ತಂದೆ ತಾಯಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಮಗು ದತ್ತು ಪಡೆದುಕೊಂಡಿರುವ ಬಗ್ಗೆ ಹೇಳಿಕೊಂಡಿದ್ದರು. ಮೂರು ತಿಂಗಳಿಂದ ನನ್ನ ಬಗ್ಗೆ ಪಾಸಿಟಿವ್ ಆಗಿ ಎಲ್ಲರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹುಶಃ ಇವಳನ್ನು ದತ್ತು ತೆಗೆದುಕೊಂಡಿದ್ದಕ್ಕೋ ಏನೋ, ನನಗೆ ಸರಿಯಾಗಿ ಗೊತ್ತಿಲ್ಲ. ನಾನು ಅಪಾರ್ಟ್ಮೆಂಟ್ನಲ್ಲಿ ನಾಯಿಗೆ ಬಿಸ್ಕಿಟ್ ಹಾಕುವಾಗ ಇವಳು ಸಿಕ್ಕಿದ್ದಳು. ಅವಳಿಗೆ ನಾನು ಮೊದಲು ಚಾಕೋಲೇಟ್ ಕೊಡಿಸಿದ್ದೆ. ನಾನು ದತ್ತು ತೆಗೆದುಕೊಳ್ಳುವುದಕ್ಕೂ ಮೊದಲೇ ಅವಳಿಗೆ ಚೈನ್ ಕೊಡಿಸಿದ್ದೆ. ನಾನು ಅವಳ ಅಮ್ಮನ ಬಳಿ ದತ್ತು ಕೊಡುವಂತೆ ಕೇಳಿದ್ದೇನೆ.
ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು 3 ತಿಂಗಳು ಬೇಕು. ಅವಳ ಅಪ್ಪ ಅಮ್ಮನಿಗೆ ಒಪ್ಪಿಗೆ ಇದೆ. ನನಗೂ ಒಪ್ಪಿಗೆ ಇದೆ. ಕಾನೂನು ಕ್ರಮ ನಡೆಯುತ್ತಿದೆ ಎಂದು ಸೋನು ಹೇಳಿದ್ದರು.