ಮಂಡ್ಯ (Mandya): ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಮಂಡ್ಯ (Mandya) ಕ್ಷೇತ್ರದ ಟಿಕೆಟ್ ಕೈ ತಪ್ಪಿದೆ.
ಬಿಜೆಪಿಯನ್ನು ಬೆಂಬಲಿಸಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ನನಗೆ ಟಿಕೆಟ್ ಸಿಕ್ಕಿ ಸಿಗುತ್ತೆ ಎಂದು ವಿಶ್ವಾಸದಿಂದ ಇದ್ದ ಸುಮಲತಾ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H D Kumarswamy) ಕ್ಷೇತ್ರ ಘೋಷಿಸುತ್ತಿದ್ದಂತೆ ರೆಬೆಲ್ ಲೇಡಿ ಸೈಲೆಂಟ್ ಆಗಿದ್ದಾರೆ.
ಜೆಡಿಎಸ್ (JDS) ನಾಯಕರು ಸೈಲೆಂಟಾಗಿದ್ದಾಗ ಸುಮಲತಾ ಸೂಪರ್ ಆಕ್ಟೀವಾಗಿದ್ದರು. ಬ್ಯಾಕ್ ಟು ಬ್ಯಾಕ್ ಮಂಡ್ಯ ಪ್ರವಾಸ ಕೈಗೊಂಡು ಅಚ್ಚರಿ ಮೂಡಿಸಿದ್ದರು. ಆದರೆ ಇದೀಗ ಸುಮಲತಾ ಅವರು ಸೈಲೆಂಟ್ ಆಗಿದ್ದಾರೆ.
ಇದೀಗ ಸುಮಲತಾ ಅಂಬರೀಷ್ ಅವರ ರಾಜಕೀಯ ನಡೆ ಮತ್ತಷ್ಟು ನಿಗೂಢವಾಗಿದೆ. ಸುಮಲತಾ ಅವರು ಮತ್ತೊಮ್ಮೆ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ? ಅಥವಾ ಮೈತ್ರಿ ಧರ್ಮ ಪಾಲಿಸ್ತಾರಾ? ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಂಡ್ಯ ಕೈತಪ್ಪುತ್ತಿದ್ದಂತೆ ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಯೂಟರ್ನ್ ಹೊಡೆದಿದ್ದಾರೆ. ದೆಹಲಿಯಿಂದ ಬರ್ತಿದ್ದಂತೆ ಮಂಡ್ಯದಲ್ಲಿ ಬೆಂಬಲಿಗರು, ಆಪ್ತರ ಜೊತೆ ಸುಮಲತಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ ತನಗೆ ನೀಡಿರುವ ಭರವಸೆ ವಿವರಿಸಿ ಬೆಂಬಲಿಗರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸುಮಲತಾ ಮೌನದ ಹಿಂದೆ ಇದೆ ಸೂಕ್ತ ಸ್ಥಾನಮಾನದ ಭರವಸೆ ಇದೇಯಾ? ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮೈತ್ರಿ ಬೆಂಬಲಿಸಲು ತೀರ್ಮಾನ ಮಾಡಿದ್ದಾರಾ? ಬಿಜೆಪಿ ವರಿಷ್ಠರ ಜೊತೆಗಿನ ಚರ್ಚೆ ಬಳಿಕ ಸುಮಲತಾ ನಿರ್ಧಾರಕ್ಕೆ ಬಂದಿದ್ದಾರೆ.
#karnataka #mandya #loksabhaelection #sumlathaambareesh #bjp #jds