ಬೆಂಗಳೂರು (Bengaluru): ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ (Dr Puneeth Rajkumar) ಜನ್ಮದಿನದ ಸಂಭ್ರಮದ ವೇಳೆ RCB ಮಹಿಳಾ ತಂಡ ಗಿಫ್ಟ್ ನೀಡಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ 2024 ನಲ್ಲಿ (WPL) ಡೆಲ್ಲಿ (delhi) ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಕಪ್ ಗೆದ್ದುಕೊಂಡಿದೆ. ಆ ಮೂಲಕ ಅಪ್ಪು ಹುಟ್ಟುಹಬ್ಬಕ್ಕೆ RCB ಮಹಿಳಾ ತಂಡ ಗಿಫ್ಟ್ ನೀಡಿದೆ.

ಅಪ್ಪು ಕೂಡ ಆರ್ ಸಿಬಿ ಅಭಿಮಾನಿಯಾಗಿದ್ರು. ಇಂದು ಅವರ ಜನ್ಮದಿನದ ದಿನವೇ RCB ಮಹಿಳಾ ತಂಡ ಚೊಚ್ಚಲ ಬಾರಿಗೆ ಕಪ್ ಗೆದ್ದು ಇತಿಹಾಸ ನಿರ್ಮಿಸಿರುವುದು ವಿಶೇಷವೇ ಸರಿ.
ಅಪ್ಪು ಹಾಗೂ ಆರ್ ಸಿಬಿ ಅಭಿಮಾನಿಗಳಲ್ಲಿ ಗೆಲುವು ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಮಹಿಳಾ ತಂಡದ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಮಹಿಳಾ ತಂಡ ಅದ್ವೀತಿಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಜೊತೆಗೆ ಐಪಿಎಲ್ ನಲ್ಲಿ RCB ಪುರುಷರ ತಂಡ ಕಪ್ ಗೆಲ್ಲಲ್ಲಿ ಎಂದು ಈಗಿನಿಂದಲೇ ಹಾರೈಸುತ್ತಿದ್ದಾರೆ. ಎಂದಿನಂತೆ ಅದೇ ಜೋಶ್ ನಲ್ಲಿ ಈ ಬಾರಿ ಕಪ್ ನಮ್ಮದೇ ಎನ್ನುತ್ತಿದ್ದಾರೆ.
#wpl #wpl2024 #cricket #rcb #rcbwomensteam #virakkohli # SmritiMandhana #ipl #rcb