ಚುನಾವಣೆ (Election) ಸಮೀಪದಲ್ಲಿರುವ ಸಂದರ್ಭದಲ್ಲಿ ರಾಜ್ಯ ರಾಜಕಾರಣ (State politics) ಬಿರುಸಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS yediyurappa) ನಿವಾಸ ಪವರ್ ಸೆಂಟರ್(power center) ಆಗಿ ಬದಲಾಗಿದೆ. ಆದ್ರೆ ಇದೆಲ್ಲದರ ನಡುವೆ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಮಹಿಳೆಯೊಬ್ಬರು ಯಡಿಯೂರಪ್ಪನವರ (yediyurappa) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರೆ.
ಅಪ್ರಾಪ್ತ ಬಾಲಕಿಯ ಮೇಲೆ ಯಡಿಯೂರಪ್ಪ (Yediyurappa) ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ (Police station)ಮೆಟ್ಟಿಲೇರಿದ್ದಾರೆ. ಈಗಾಗಲೇ ಈ ಬಗ್ಗೆ ಯಡಿಯೂರಪ್ಪ (Yediyurappa) ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು , ಯಾರೋ ಹೆಣ್ಣುಮಗಳು ನನ್ನ ಮೇಲೆ ಈ ರೀತಿ ಕೇಸ್ ಫೈಲ್ (case file) ಮಾಡಿದ್ದಾರೆ. ಕಾನೂನಾತ್ಮಕವಾಗಿ (As per law)ನಾನು ಅದನ್ನ ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ದೂರು (Complaint) ಕೊಟ್ಟಿರುವ ಮಹಿಳೆ ಹಲವಾರು ಬಾರಿ ಮನೆ ಬಳಿ ಬಂದಿದ್ದಾರೆ. ಆದ್ರೆ ನಾವು ಹತ್ತಿರ ಸೇರಿಸಿರಲಿಲ್ಲ. ಹೀಗೆ ಒಮ್ಮೆ ಮನೆ ಬಳಿ ಬಂದು ನಂಗೆ ಅನ್ಯಾಯವಾಗಿದೆ ಅಂತ ಕಣ್ಣೀರು ಹಾಕಿದ್ರು. ಹೀಗಾಗಿ ನಾನೇ ಮಾತನಾಡಿ ಪೊಲೀಸ್ ಕಮಿಷನರ್ (police commissioner) ದಯಾನಂದ್ ಗೆ ಕರೆ (Call) ಮಾಡಿ ಸಹಾಯ ಮಾಡಲು ಹೇಳಿದ್ದೆ. ಒಬ್ಬರಿಗೆ ಒಳ್ಳೆದು ಮಾಡಲು ಹೋದ್ರೆ ಹೀಗ್ ಆಗುತ್ತೆ ನೋಡಿ ಅಂತ BSY ಪ್ರತಿಕ್ರಿಯಿಸಿದ್ರು. ಕಂಪ್ಲೇಂಟ್ (Complaint) ಫೈಲ್ ಆಗಿದ್ದು ಕೂಲಂಕುಶವಾಗಿ ತನಿಖೆ ಮಾಡ್ತೀವಿ ಅಂತ ಹೋಂ ಮಿಸ್ಟರ್ (Home minister)ಪರಮೇಶ್ವರ್ ತಿಳಿಸಿದ್ದಾರೆ.