ಬೆಂಗಳೂರು (Bengaluru): ʻಒಳ್ಳೆಯದು ಮಾಡಿದರೆ ಹೀಗಾಗುತ್ತೇʼ ಎಂದು ತಮ್ಮ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿರುವ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B S Yediyurappa) ಪ್ರತಿಕ್ರಿಯಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮೇಲೆ ಯಾರೋ ಒಬ್ಬ ಮಹಿಳೆ ದೂರು ದಾಖಲಿಸಿದ್ದಾರೆ ಎಂದು ಗೊತ್ತಾಯಿತು. ನನ್ನ ಮನೆ ಬಳಿ ಅನೇಕ ಬಾರಿ ಬರುತ್ತಿದ್ದರು. ಪೊಲೀಸರೊಂದಿಗೆ ಮಾತನಾಡಿ, ಕಮಿಷನರ್ ಬಳಿ ಕಳುಹಿಸಿಕೊಟ್ಟೇ. ಈಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ. ಒಬ್ಬರಿಗೆ ಒಳ್ಳೆಯದು ಮಾಡಿದ್ರೆ, ನಮ್ಮ ಮೇಲೆ ಹೇಗೆ ಆಗುತ್ತೇ? ಎಂದು ನಕ್ಕು ಉತ್ತರಿಸಿದರು.
ಕೆ.ಎಸ್.ಈಶ್ವರಪ್ಪ (K S Eshwarappa) ನಮ್ಮ ಜೊತೆಗೆ ಇರಬೇಕು. ಅವರ ಮನವೊಲಿಸುತ್ತೇವೆ. ಜಗದೀಶ್ ಶೆಟ್ಟರ್ (Jagadish Shettar) ಬಂದು ಭೇಟಿಯಾಗಿದ್ರು ಅವರೊಂದಿಗೆ ಮಾತುಕತೆ ನಡೆಸಿ, ಅವರನ್ನು ಬೆಳಗಾವಿಗೆ ಒಪ್ಪಿಸಿದ್ದೇವೆ ಎಂದರು.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯಡಿಯೂರಪ್ಪ ಅವರ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದೆ.
ಬಾಲಕಿಯ ತಾಯಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
#Karnataka #bengaluru #bsyediyurappa #pocosact #policecase