ಚಾಮರಾಜನಗರ (Chamarajanagara): ಲೋಕಸಭಾ ಚುನಾವಣೆಗಾಗಿ (Loksabha election) ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಇಂದು ಚಾಮರಾಜನಗರದ ಹೆಗ್ಗವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಯಾಕೆ ಸಿಎಎ ಜಾರಿ ಮಾಡಿರಲಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಕಾಂಗ್ರೆಸ್ (Congress) ಸರ್ಕಾರ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಕೊಡುತ್ತಿದೆ ಎನ್ನುವ ಆರ್.ಅಶೋಕ್ (R.Ashok) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಸುಳ್ಳು. ನೀರು ಬಿಡುವುದಕ್ಕೆ ನೀರು ಎಲ್ಲಿದೆ. ನಾವು ತಮಿಳುನಾಡಿಗೆ ಒಂದು ತೊಟ್ಟು ನೀರನ್ನು ಕೊಡಲ್ಲ. ಅವರು ಸಹ ನೀರು ಕೇಳಿಲ್ಲ. ತಮಿಳುನಾಡಿನವರೂ ಕೇಳಿದ್ರು ಕೊಡಲ್ಲ. ಕೇಂದ್ರದವರು ಹೇಳಿದ್ರು ಕೊಡಲ್ಲ. ಅಲ್ಲದೆ ನೀರು ಎಲ್ಲಿದೆ ಬಿಡುವುದಕ್ಕೆ? ಡ್ಯಾಂ ಖಾಲಿ ಇದೆ ಎಂದು ಹೇಳಿದರು.
ಮೈಸೂರಿನಲ್ಲಿ ಸಿಎಂ ಹಾಗೂ ಯಡಿಯೂರಪ್ಪ (yediyurappa) ನಡುವೆ ಹೊಂದಾಣಿಕೆ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ಯಾವನ್ನೋ ಒಬ್ಬ ದಾರಿಯಲ್ಲಿ ಹೋಗುವವರು ಹೇಳಿದ್ರೆ ಆಗಲ್ಲ. ಯದುವೀರ್ ಗೆ (Yaduveer) ನಾನು ಬಿಜೆಪಿ ಗೆ ಹೋಗಿ ನಿಲ್ಲು ಅಂತ ಹೇಳಿದ್ನ . ಪ್ರತಾಪ್ ಸಿಂಹ (Pratap Simha) ಹೆಸರು ಕೆಡಿಸಿಕೊಂಡಿದ್ದಾರೆ ಅಂತ ಅವರಿಗೆ ಟಿಕೆಟ್ ಕೋಡ್ತಿಲ್ಲ ಅನ್ಸುತ್ತೆ. ಅದನ್ನ ಬಿಟ್ಟು ನೀವೇ ಸೃಷ್ಠಿ ಮಾಡಿ ಹೊಂದಾಣಿಕೆ ರಾಜಕೀಯ ಅಂತ ಹೇಳಿದ್ರೆ ಎಂದು ಪ್ರಶ್ನಿಸಿದರು.
ನನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಹೋಗುತ್ತೆ ಎನ್ನುವ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಓಹ್, ಎರಡು ಸಲ ಎಂಪಿ ಆಗಿದ್ದ ಅಲ್ವಾ ಯಾಕೆ ನನ್ನ ಕುರ್ಚಿ ಅಲುಗಾಡಲಿಲ್ಲ. ನಮಗೆ ಬಿಜೆಪಿ ಯಾರನ್ನ ಅಭ್ಯರ್ಥಿ ಮಾಡ್ತಾರೆ ಎನ್ನುವ ಪ್ರಶ್ನೆ ಇಲ್ಲ. ನಾವು ಬಿಜೆಪಿ ನ ಸೋಲಿಸಬೇಕು ಅಷ್ಟೇ. ಕಾಂಗ್ರೆಸ್ ಬಡವರ ಪರ ನೀಡಿರುವ ಅಭಿವೃದ್ಧಿಗಳ ಮೇಲೆ ಅವಲಂಬನೆ ಆಗಿದ್ದೇವೆ ಅಷ್ಟೇ. ಬಿಜೆಪಿ ಅಭ್ಯರ್ಥಿ ಮೇಲೆ ಅಲ್ಲ. ನಾವು ಬಿಜೆಪಿನ ಸೋಲಿಸುತ್ತೇವೆ ಅಷ್ಟೇ ಎಂದರು.
#Karnataka #chamarajanagara #siddaramaiah #CAA #loksabhaelection #bjp #pratapsimha #congress





