ಚಾಮರಾಜನಗರ (Chamarajanagara): ಸಂವಿಧಾನ (Constitution) ಬದಲಾವಣೆ ಬಿಜೆಪಿ (BJP) ಅಜೆಂಡಾ. ಅದು ಅವರ ಹಿಡನ್ ಅಜೆಂಡಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಇಂದು ಚಾಮರಾಜನಗರದ ಹೆಗ್ಗವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ರ (Ananthkumar hegde) ಸಂವಿಧಾನ ಬದಲಿಸುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ತನ್ನ ಅಜೆಂಡಾವನ್ನು ಅನಂತ್ ಕುಮಾರ್ ಅವರ ಮೂಲಕ ಹೇಳಿಸುತ್ತಿದೆ ಎಂದರು.

ಅವನೇನು ಸಾಮಾನ್ಯ ವ್ಯಕ್ತಿ ಅಲ್ಲ. ಐದು ಬಾರಿ ಎಂಪಿ ಆಗಿದ್ದವನು. ಕೇಂದ್ರದಲ್ಲಿ ಮಂತ್ರಿ ಆಗಿದ್ದವನು. ಅವನೇ ಹೇಳಬೇಕಿದ್ದರೇ ಪಕ್ಷದ ಅಜೆಂಡಾ ಅದು. ಈ ಮೊದಲು ಸಹ ಅವನು ಅದನ್ನೇ ಹೇಳಿದ್ದ , ಅವನ ವಿರುದ್ಧ ಕ್ರಮ ಜರುಗಿಸಿದ್ರ ಇಲ್ಲ. ಈಗಲೂ ಅದನ್ನೇ ಹೇಳುತ್ತಿದ್ದಾನೆ. ಮೆಜಾರಿಟಿ ಕೊಟ್ರೆ ನಾವು ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ. ಬಿಜೆಪಿ ಅವರು ಮನುವಾದ, ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವವರು ಎಂದು ವಾಗ್ದಾಳಿ ನಡೆಸಿದರು.
#karnataka #chamrajnagar #Constitution #siddaramaiah #ananthkumarhegde #bjp #congress











