ತಮಗೆ ವಿಧಾನಸಭಾ ಟಿಕೆಟ್ (MLA ticket) ಮಿಸ್ ಆದಾಗ್ಲೂ ಸುಮ್ಮನಿದ್ದ ಮಾಜಿ ಡಿಸಿಎಂ ಈಶ್ವರಪ್ಪ (Eshwarappa), ಇದೀಗ ಅಸಮಾಧಾನಗೊಂಡಿದ್ದಾರೆ. ತಮಗೆ ಟಿಕೆಟ್ ಮಿಸ್ ಆದ್ರು ಪರ್ವಾಗಿಲ್ಲ , ಮುಂಬರುವ ಲೋಕಸಭಾ ಚುನಾವಣೆಗೆ (Parliment election)ಪುತ್ರ ಕಾಂತೇಶ್ (kantesh)ಗೆ ಹಾವೇರಿ (Haveri) ಟಿಕೆಟ್ ಕೊಡಿಸಬೇಕು ಎಂಬ ಲೆಕ್ಕಾಚಾರದಲ್ಲಿದ್ದ ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ (BJP high command) ಶಾಕ್ ಕೊಟ್ಟಿದೆ. ಈಶ್ವರಪ್ಪ ಪುತ್ರ ಕಾಂತೇಶ್ ಗೆ ಹಾವೇರಿ ಟಿಕೆಟ್ ಮಿಸ್ ಆಗಿದ್ದು, ಹೈಕಮ್ಯಾಂಡ್ ಬೊಮ್ಮಾಯಿಗೆ ಹಾವೇರಿ ಟಿಕೆಟ್ ನೀಡಿದೆ ಎನ್ನಲಾಗ್ತಿದೆ.

ಹೀಗಾಗಿ ಮಗನ ಭವಿಷ್ಯ ರೂಪಿಸಬೇಕು ಎಂದುಕೊಂಡಿದ್ದ ಈಶ್ವರಪ್ಪ (Eshwarappa) ಬಿಜೆಪಿ ಹೈಕಮಾಂಡ್ ಮೇಲೆ ಸಿಡಿಮಿಡಿಗೊಂಡಿದ್ದಾರೆ. ಈ ಬಗ್ಗೆ ಇದುವರೆಗೂ ಏನು ಪ್ರತಿಕ್ರಿಯಿಸದ ಈಶ್ವರಪ್ಪ , ಅಧಿಕೃತ ಘೋಷಣೆವರೆಗೂ ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಜೊತೆ ಜೊತೆಗೆ ಬಿಜೆಪಿ (bjp)ಗೆ ಪರೋಕ್ಷ ಸಂದೇಶವನ್ನೂ ರವಾನೆ ಮಾಡಿದ್ದಾರೆ. ಖುದ್ದು ತಾವೇ ಅಖಾಡಕ್ಕಿಳಿಯುವ ಸುಳಿವು ಕೊಟ್ಟಿದ್ದಾರೆ.

ಹೌದು, ಈಗಾಗಲೇ ಶಿವಮೊಗ್ಗದಲ್ಲಿ(shivamogga)ತಮ್ಮ ಬೆಂಬಲಿಗರ ಸಭೆ ನಡೆಸಿರುವ ಈಶ್ವರಪ್ಪ, ಒಂದುವೇಳೆ ತಮ್ಮ ಪುತ್ರನಿಗೆ ಟಿಕೆಟ್(Ticket) ಮಿಸ್ ಆದ್ರೆ, ಶಿವಮೊಗ್ಗ (Shivamogga) ಕ್ಷೇತ್ರದಿಂದ ತಾವೇ ಪಕ್ಷೇತರ ಅಭ್ಯರ್ಥಿಯಾಗಿ(Independent candidate)ಕಣಕ್ಕೆ ದುಮುಕುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲಕ BSY ಪುತ್ರ , ಹಾಲಿ ಸಂಸದ ಬಿವೈ ರಾಘವೇಂದ್ರ (BY Raghavendra) ವಿರುದ್ಧ ಸ್ಪರ್ಧೆ ಮಾಡಲು ಈಶ್ವರಪ್ಪ ಮುಂದಾಗಿದ್ದರಂತೆ. ನನ್ನ ಮಗನ ಟಿಕೆಟ್ ಮಿಸ್ ಆದ್ರೆ , ನಿಮ್ಮ ಮಗನ ಗೆಲುವು ಕಷ್ಟವಾಗಲಿದೆ ಎಂಬ ಸಂದೇಶವನ್ನ BSY ಗೆ ತಲುಪಿಸೋ ನಿಟ್ಟಿನಲ್ಲಿ ಈಶ್ವರಪ್ಪ (Eshwarappa) ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.











