ಬೈಜೂಸ್ (Byjus) ಹಾಗೂ ವಿವಾದಗಳಿಗೂ ಯಾವಾಗಲೂ ಒಂದಿಲ್ಲ ಒಂದು ಸಂಬಂಧ ಇದ್ದೇ ಇರುತ್ತದೆ. ಅದರಲ್ಲೂ ಭಾರತ (India)ಮೂಲದ ‘ಬೈಜೂಸ್’ (byjus)ಒಂದು ಕಾಲದಲ್ಲಿ, ಜಗತ್ತಿನಾದ್ಯಂತ ಸದ್ದನ್ನು ಮಾಡಿತ್ತು. ಆದರೆ ಈಗ ಈ ಕಂಪನಿ (company)ಬಂದ್ ಆಗಲಿದೆ ಎಂಬ ವದಂತಿ ಇದೆ. ಈ ಮಧ್ಯೆ ಬೈಜೂಸ್ ಕಂಪನಿ ವಿರುದ್ಧ ಸಂಬಳ ಕೊಟ್ಟಿಲ್ಲ ಎನ್ನುವ ಆರೋಪ ಕೂಡ ಇತ್ತು. ಆದ್ರೆ ಇದೀಗ ತಮ್ಮ ನೌಕರರಿಗೆ (employees)ಬೈಜೂಸ್ ಗುಡ್ ನ್ಯೂಸ್ ಕೊಟ್ಟಿದೆ.

ಸದ್ಯದ ಮಾಹಿತಿ ಪ್ರಕಾರ ಬೈಜೂಸ್ ಕಂಪನಿ ಕಡಿಮೆ ಹೊಂದಿರುವ ಶೇ 25ರಷ್ಟು ಉದ್ಯೋಗಿಗಳಿಗೆ ಪೂರ್ಣ ಪ್ರಮಾಣ ಸಂಬಳ (full salary)ಕೊಟ್ಟಿದೆ. ಬಾಕಿ ಉದ್ಯೋಗಿಗಳಿಗೆ ಭಾಗಶಃ ಪಾವತಿ ಮಾಡಿದೆ. ಬೈಜೂಸ್ ಕಂಪನಿ ಮಾತೃ ಸಂಸ್ಥೆ ‘ಥಿಂಕ್ & ಲರ್ನ್’ನಲ್ಲಿ (Think & learn)ತಲೆದೋರಿದ ಬಿಕ್ಕಟ್ಟಿನ ಪರಿಣಾಮ ಸಂಬಳ ಪಾವತಿಗೆ ಸಾಕಷ್ಟು ಸಮಸ್ಯೆ ಆಗಿತ್ತು.

ಈ ಕುರಿತು ಇದೀಗ ಸಂಸ್ಥೆಯ ಆಡಳಿತ ಮಂಡಳಿ ಕೂಡ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಈಗ ವಿಶೇಷ ಪತ್ರವನ್ನು ರಿಲೀಸ್ (release) ಮಾಡಿದ್ದು, ಕೆಲವು ಹೂಡಿಕೆದಾರರ ತಕರಾರಿನ ಪರಿಣಾಮವಾಗಿ ಕಂಪನಿ ಆರ್ಥಿಕ ನಿರ್ಬಂಧ ಎದುರಿಸಿದೆ. ಹೀಗಾಗಿ ಸದ್ಯಕ್ಕೆ ಸಂಬಳ(salary) ಪಾವತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತನ್ನ ನೌಕರರಿಗೆ ಮಾಹಿತಿ ನೀಡಿದೆ.

ಇತ್ತೀಚೆಗೆ ನಡೆದಿದ್ದ ಷೇರುದಾರರ (share holders) ವಿಶೇಷ ಸಾಮಾನ್ಯ ಸಭೆಯಲ್ಲಿ ಬೈಜೂಸ್ ಸಂಸ್ಥೆಯ ಸಂಸ್ಥಾಪಕ ರವೀಂದ್ರನ್ & ಅವರ ಕುಟುಂಬಸ್ಥರನ್ನು ಆಡಳಿತ ಮಂಡಳಿಯಿಂದಲೇ ಪದಚ್ಯುತಿಗೊಳಿಸಲು ನಿರ್ಣಯವನ್ನು ಕೈಗೊಳ್ಳಲಾಗಿತ್ತು. 6 ಪ್ರಮುಖ ಹೂಡಿಕೆದಾರರ(investors) ಪೈಕಿ 4 ಹೂಡಿಕೆದಾರರು ಇದೀಗ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಬೆಂಗಳೂರು ಘಟಕದ ಮೊರೆ ಹೋಗಿದ್ದಾರೆ. ಆಡಳಿತ ಮಂಡಳಿ ಪುನರ್ ರಚಿಸುವಂತೆ ಈಗ ಮನವಿ ಮಾಡಲಾಗಿದೆ. ಮಂದಿನ ಬೆಳವಣಿಗೆ ಕಾದು ನೋಡಬೇಕಿದೆ.