ಮೈಸೂರು-ಕೊಡಗು (Musuru-Kodagu) ಹಾಲಿ ಸಂಸದ ಪ್ರತಾಪ್ ಸಿಂಹ(Prathap Simha) ರಿಗೆ ಟಿಕೆಟ್(Ticket) ಸಿಗಲ್ಲ ಎಂಬ ಚರ್ಚೆ ವ್ಯಾಪಕವಾಗಿ ಹಬ್ಬಿದ್ದು, ಅಷ್ಟಕ್ಕೂ ಅವರಿಗೆ ಟಿಕೆಟ್ ನಿರಾಕರಣೆ ಮಾಡುತ್ತಾರಾ? ಅವರಿಗೆ ಟಿಕೆಟ್ ನಿರಾಕರಣೆಗೆ ಕಾರಣಗಳಾದ್ರೂ ಏನು? ಎರಡು ಅವಧಿಯಲ್ಲೂ ಆ್ಯಕ್ಟೀವ್ (Active) ಸಂಸದರಾಗಿ ಕಾರ್ಯನಿರ್ವಹಣೆ ಮಾಡಿರುವ ಪ್ರತಾಪ್ ಸಿಂಹರಿಗೆ ಈಗ ಈ ಪರಿ ವಿರೋಧವೇಕೆ? ಇದೇನು ಆಡ್ಜಟ್‌ಮೆಂಟ್ (Adjustment) ರಾಜಕಾರಣವೇ? ಅಥವಾ ತಾವೇ ಮಾಡಿಕೊಂಡಿರುವ ಎಡವಟ್ಟೇ? ಇಂದು ಸಂಜೆ ಈ ಬಗ್ಗೆ ವಿಸ್ತೃತವಾದ ವಿಚಾರ ಪ್ರತಿಧ್ವನಿ ಹೇಳಲು ಮುಂದಾಗಿದೆ.

*ಪ್ರತಾಪ್ ಸಿಂಹಗೆ ಟಿಕೆಟ್ ನೀಡಲು ಹೈಕಮಾಂಡ್ (High Command) ನಾಯಕರಲ್ಲಿ ಇಲ್ಲ ಸಮ್ಮತಿ!*
ಇತ್ತೀಚೆಗೆ ದೆಹಲಿ (Delhi) ಯಲ್ಲಿ ನೂತನ ಸಂಸತ್ ಭವನ ಲೋಕಾರ್ಪಣೆ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆ ಸಂಸತ್ ಭವನ ಲೋಕಾರ್ಪಣೆ ಆದ ಬಳಿಕ ನಡೆದ ಸಂಸತ್ ಅಧಿವೇಶನದಲ್ಲಿ, ಸದನ ನೋಡಲು ಬರುವವರಿಗೆ ಪಾಸು (Passes) ಗಳನ್ನು ಸಂಸದರು ನೀಡುತ್ತಾರೆ. ಅಂತಹುದ್ದೇ ವ್ಯವಸ್ಥೆಯನ್ನು ಹಾಲಿ ಮೈಸೂರು- ಕೊಡಗು (Mysuru- Kodagu) ಸಂಸದ ಪ್ರತಾಪ್ ಸಿಂಹ (Prathap Simha) ಮಾಡಿದ್ರು. ಅವರ ಕ್ಷೇತ್ರದ ಮತದಾರರಿಗೆ ಸದನ ನೋಡಲು ಪಾಸುಗಳನ್ನು ಕೊಟ್ಟಿದ್ರು. ಅದೇ ಪಾಸುಗಳನ್ನು ಪಡೆದಿದ್ದವರಲ್ಲಿ ಒಬ್ಬ ಸಂಸತ್ ಒಳಗೆ ಸದನ ನಡೆಯುತ್ತಿರುವಾಗಲೇ ಸ್ಮೋಕ್ ಬಾಂಬ್ (Smoke Bomb) ಸ್ಫೋಟಿಸಿದ್ದ. ಈ ವಿಚಾರ ರಾಷ್ಟ್ರೀಯ (National) ಹಾಗೂ ಅಂತರಾಷ್ಟ್ರೀಯ (International) ಮಟ್ಟದಲ್ಲಿ ಚರ್ಚೆಯಾಗಿದ್ದು, ಪಕ್ಷಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿತ್ತು. ಇನ್ನು ಈ ವಿಚಾರ ಎಷ್ಟರಮಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿತ್ತು ಅಂದರೆ, ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha) ಅವರೇ ರಾಜೀನಾಮೆ ನೀಡಬೇಕೆಂಬ ಮಟ್ಟದವರೆಗೂ ಹೋಗಿತ್ತು.
ಇದೊಂದು ವಿಚಾರ ಆಗಿದ್ರೆ ಪರವಾಗಿಲ್ಲ. ಇತ್ತ ಪ್ರತಾಪ್ ಸಿಂಹ ತಾವೇ ಪ್ರತಿನಿಧಿಸುವ ಮೈಸೂರು- ಕೊಡಗು ಕ್ಷೇತ್ರ ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿ ಕಳೆದ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸೀಟುಗಳನ್ನು ಪಕ್ಷಕ್ಕೆ ತಂದುಕೊಟ್ಟಿಲ್ಲ ಎಂಬ ಚರ್ಚೆಗಳು ಆಗುತ್ತಿದ್ದು, ಸಂಸದರ ಕಾರ್ಯವೈಖರಿ ಮೇಲೆ ಪರಿಣಾಮ ಬೀರಿದೆ.
ಹೀಗೆ ಎರಡು ವಿಚಾರಗಳಲ್ಲಿ ಸಂಸದ ಪ್ರತಾಪ್ ಸಿಂಹ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಸದ್ಯ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 195 ಮಂದಿಗೆ ಟಿಕೆಟ್ ಘೋಷಿಸಿದೆ. ಇದರಲ್ಲಿ ಹಾಲಿ 34 ಸಂಸದರಿಗೆ ಟಿಕೆಟ್ ನಿರಾಕರಿಸಿದ್ದು, ಪ್ರತಾಪ್ ಸಿಂಹರಿಗೂ ಇದೇ ಮಾನದಂಡಗಳ ಆಧಾರದಡಿಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಎನ್ನಲಾಗಿದೆ.
#PrathapSimha #mpMysore #bjpkarnataka #MysoreKodagu #Mpelection













