ನೊಣವಿನಕೆರೆ ಸ್ವಾಮೀಜಿ ಶಿವರಾತ್ರಿಯ ನಂತರ ನುಡಿದಿರುವ ಭವಿಷ್ಯ ದೇಶದಲ್ಲೇ ಸಂಚಲನ ಮೂಡಿಸಿದೆ. ಈ ಹಿಂದೆ ಕೊರೊನಾ(corona) ಮತ್ತು ಕಾಂಗ್ರೆಸ್ (congress) 135 ಸೀಟು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದ ಸ್ವಾಮೀಜಿಯೇ ಈಗ ಇಂಥ ಭವಿಷ್ಯ ನುಡಿದಿದ್ದು ಸಂಚಲನ ಮೂಡಿಸಿದೆ.

ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್ ಎಂದು ಮೊನ್ನೆ-ಮೊನ್ನೆಯಷ್ಟೇ ಚಿಕ್ಕಮಗಳೂರು(chikkamagalur) ಕಡೂರಿನ ಜಿಗಣೇಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿದಿತ್ತು. ಈ ಬಾರಿ ಮತ್ತೆ ಬಿಜೆಪಿ(bjp) ಅಧಿಕಾರಕ್ಕೆ ಬರುತ್ತೆ ಅಂತ ಮೈಲಾರಲಿಂಗಸ್ವಾಮಿ ನುಡಿದಿದ್ದಾನೆ ಎಂದು ಇದನ್ನ ವಿಶ್ಲೇಶಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೋರ್ವ ಗುರೂಜಿ ಬೇರೆಯದೇ ಭವಿಷ್ಯ ನುಡಿದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಪ್ರಿಯಾಂಕ ಗಾಂಧಿಯವರೇ (priyanka gandhi) ದೇಶದ ಪ್ರಧಾನ ಮಂತ್ರಿಯಾಗ್ತಾರೆ ಅಂತ ಯಶ್ವಂತ ಗುರೂಜಿ ಶಿವರಾತ್ರಿಯ ಕಾಲಜ್ಙಾನ ಭವಿಷ್ಯ ನುಡಿದಿದ್ದಾರೆ. ತುಮಕೂರಿನ ನೊಣವಿನಕೆರೆಯ ಸ್ವಾಮೀಜಿ ಈ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಸ್ತ್ರೀ ಒಬ್ಬಳು ಅಧಿಕಾರ ಮಾಡುವಳು..ಮಾತೃ ವಾತ್ಸಲ್ಯದಿಂದ ಪರರಿಗೆ ಬಿಟ್ಟಕೊಡುವಳು ಎಂದಿದ್ದಾರೆ. ಅಂದರೆ ಮೊದಲು ಪ್ರಿಯಾಂಕ ಗಾಂಧಿ ಪ್ರಧಾನಿಯಾಗಿ ನಂತರ ರಾಹುಲ್ ಗಾಂಧಿಗೆ (rahul gandhi) ಬಿಟ್ಟುಕೊಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಯಶ್ವಂತ ಸ್ವಾಮೀಜಿ ಪ್ರಕಾರ ಶಿವರಾತ್ರಿಗೂ ಮುನ್ನ ಚುನಾವಣೆ ನಡೆದಿದ್ದರೇ ಮೋದಿಗೆ (modi) ಪ್ರಧಾನಿಯಾಗುವ ಯೋಗವಿತ್ತು. ಆದ್ರೆ ಈಗ ಮೋದಿಗೆ (modi) ಆ ಯೋಗ ಇಲ್ಲ, ಅವರಿಗೆ ಅನಾರೋಗ್ಯ ಕಾಡಬಹುದು ಅಂತ ಗುರೂಜಿ ಹೇಳಿದ್ದಾರೆ . ಒಬ್ಬೊಬ್ಬರು ಒಂದೊಂದು ಭವಿಷ್ಯ ನುಡಿದಿದ್ದು, ಅಂತಿಮವಾಗಿ ಮತದಾರರು ಯಾರಿಗೆ ಮಣೆ ಹಾಕ್ತಾನೋ ! ದೇವರೇ ಬಲ್ಲ.












