ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುತ್ತಿಲ್ಲ. ಆದರೆ, ನಾಡ ದ್ರೋಹಿ ಕಾಂಗ್ರೆಸ್ ಸರ್ಕಾರ ಮಾತ್ರ ತಮಿಳುನಾಡಿಗೆ (tamilnadu) ಕಳ್ಳತನದಿಂದ ಕಾವೇರಿ (Kaveri) ನೀರು ಹರಿಸುತ್ತಲೇ ಇದೆ ಎಂದು ಬಿಜೆಪಿ (Bjp) ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಿಜೆಪಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ತಮಿಳುನಾಡಿನ ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದ್ದರೂ, ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾವನ್ನು ಯಶಸ್ವಿಗೊಳಿಸಲು ಇರುವ ಕಾವೇರಿಯ ಒಡಲನ್ನು ಬಗೆಯುತ್ತಿದೆ ನಾಡ ದ್ರೋಹಿ ಕಾಂಗ್ರೆಸ್.
ಮಜಾವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಅವರೇ, ಇದೇನಾ ನೀವು ಕನ್ನಡಿಗರಿಗೆ ಕೊಡುತ್ತಿರುವ ನಾಡ ದ್ರೋಹದ ಗ್ಯಾರಂಟಿ? ಎಂದು ಪ್ರಶ್ನಿಸಿದೆ.
ಕಾವೇರಿ ಒಡಲು ಬತ್ತಿ ಹೋಗುತ್ತಿದ್ದರೂ, ಅದನ್ನೂ ಹಿಂಡಿ ಹಿಪ್ಪೆ ಮಾಡಿ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ ಎಂದರೆ, ಟ್ಯಾಂಕರ್ ಮಾಫಿಯಾದಿಂದ ಕಮಾಯಿ ಸಿಕ್ಕಾಪಟ್ಟೆ ಬರುತ್ತಿದೆ ಎಂದೇ ಅರ್ಥ. ಕನ್ನಡಿಗರ ಮೇಲೆ ಅದೆಷ್ಟು ದ್ವೇಷ ಸಾಧಿಸುತ್ತಿರಬೇಡ ಈ #ಸ್ಲೀಪಿಂಗ್_ಸರ್ಕಾರ! ಎಂದು ವಾಗ್ದಾಳಿ ನಡೆಸಿದೆ.
#karnataka #bengaluru #siddaramaiah #congress #bjp #kaveri #tamilnadu












