ಮಂಗಳೂರು (Mangaluru): ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಇಂದು ಮಂಗಳೂರಿನ ಕೊರಗಜ್ಜ (Koragajja) ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಕೊರಗಜ್ಜ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದರ್ಶನ್ ಅವರೊಂದಿಗೆ ನಟ ಚಿಕ್ಕಣ್ಣ (Chikanna), ನಟ ಯಶಸ್ ಸೂರ್ಯ (Yashas Surya) ಕೂಡ ಇದ್ದರು. ಈ ವೇಳೆ ಕೊರಗಜ್ಜ ಕ್ಷೇತ್ರದ ವತಿಯಿಂದ ದರ್ಶನ್‌ಗೆ ಗೌರವ ಸಲ್ಲಿಸಿದ್ದಾರೆ.
ಪೂಜೆಯ ಬಳಿಕ ದರ್ಶನ್ ಮಾಧ್ಯಮದವರೊಂದಿಗೆ ಮಾತನಾಡಿ, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಹಿಂದೆ ಮಂಗಳೂರಿಗೆ ಸುಮಾರು ಬಾರಿ ಬಂದಿದ್ದೇನೆ. ಆದರೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೀನಿ. ಇಲ್ಲಿಗೆ ಇಂದು ಬಂದಿರುವುದಕ್ಕೆ ಬೇರೆ ಯಾವುದೇ ಕಾರಣ ಇಲ್ಲ ಎಂದಿದ್ದಾರೆ.
ಅಲ್ಲದೆ ಇದೇ ವೇಳೆ ಮಂಡ್ಯದಲ್ಲಿ (Mandya) ಸುಮಲತಾ (sumalatha) ಪರ ಪ್ರಚಾರಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಮ್ಮ ಯಾವತ್ತಿಗೂ ಅಮ್ಮನೇ. ಎಂದಿಗೂ ಅವ್ರನ್ನ ಬಿಟ್ಟುಕೊಡುವುದಿಲ್ಲ. ಅಂತ ಹೇಳಿ ಲೋಕಸಭಾ ಎಲೆಕ್ಷನ್ (Loksabha Election) ಪ್ರಚಾರಕ್ಕೆ ಹೋಗುವ ಮುನ್ಸೂಚನೆ ಕೊಟ್ಟಿದ್ದಾರೆ.
#karnataka #mangaluru #koragajatemple #darshan #chikanna #YashasSurya











