ನವದೆಹಲಿ (Newdelhi): 2024 ರ ಲೋಕಸಭಾ ಚುನಾವಣೆಗೆ (Loksabha Election) ಎರಡು ಹಂತಗಳಲ್ಲಿ ಟಿಕೆಟ್ ಘೋಷಣೆ ಮಾಡಲು, ಬಿಜೆಪಿ (BJP) ಹೈಕಮಾಂಡ್ ನಾಯಕರು ನಿರ್ಧರಿಸಿದ್ದಾರೆ.
ಈಗಾಗಲೇ ಸತತ ಎರಡು ದಿನಗಳ ಕಾಲ ಮ್ಯಾರಥಾನ್ ಮೀಟಿಂಗ್ಗಳನ್ನು ಮಾಡಿರುವ ಬಿಜೆಪಿ ನಾಯಕರುಗಳು, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಪಟ್ಟಿ ಬಿಡುಗಡೆಗೆ ನಿರ್ಧಾರ ಮಾಡಿದ್ದಾರೆ. ಮೊದಲ ಪಟ್ಟಿಯಲ್ಲಿ ಗೊಂದಲವಿಲ್ಲದ ಏಕೈಕ ಅಭ್ಯರ್ಥಿಗಳು ಇರುವ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡುವುದು. ಎರಡನೇ ಪಟ್ಟಿಯಲ್ಲಿ ಟಿಕೆಟ್ಗಾಗಿ ಪೈಪೋಟಿ ಇರುವ ಕ್ಷೇತ್ರಗಳು ಹಾಗೂ ಜೆಡಿಎಸ್ಗೆ ಬಿಟ್ಟು ಕೊಡಬೇಕಾಗಿರುವ ಕ್ಷೇತ್ರಗಳ ಟಿಕೆಟ್ ಬಗ್ಗೆ ತಿಳಿಸುವುದಾಗಿ ಹೇಳಿದೆ.
ಮೊದಲ ಪಟ್ಟಿಯಲ್ಲಿ 14, ಎರಡನೇ ಪಟ್ಟಿಯಲ್ಲೂ 14 ಮಂದಿ ಘೋಷಣೆ
ಇನ್ನು ಮೊದಲ ಪಟ್ಟಿಯಲ್ಲಿ 14 ಹಾಗೂ ಎರಡನೇ ಪಟ್ಟಿಯಲ್ಲಿ 14 ಮಂದಿಯ ಹೆಸರನ್ನು ಘೋಷಿಸಲು ಹೈಕಮಾಂಡ್ ನಾಯಕರು ಚಿಂತಿಸಿದ್ದು, ಪ್ರತಿಧ್ವನಿಗೆ ಮೊದಲ ಪಟ್ಟಿಯ ಅಭ್ಯರ್ಥಿಗಳ ಹೆಸರು ಲಭ್ಯವಾಗಿದೆ.
1. ಧಾರವಾಡ – ಪ್ರಹ್ಲಾದ್ ಜೋಶಿ (Pralhad Joshi)
2. ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (Tejasvi Surya)
3. ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್ (P.C.Mohan)
4. ಬೆಂಗಳೂರು ಉತ್ತರ – ಡಿ.ವಿ. ಸದಾನಂದಗೌಡ (D.V.Sadananda Gowda)
5. ಮೈಸೂರು-ಕೊಡಗು – ಪ್ರತಾಪ್ ಸಿಂಹ (Pratap simha)
6. ಶಿವಮೊಗ್ಗ – ಬಿ.ವೈ. ರಾಘವೇಂದ್ರ (B.Y.Raghavendra)
7. ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ (Annasaheb Jolle ) 8. ಬಾಗಲಕೋಟೆ – ಪಿ.ಸಿ. ಗದ್ದೀಗೌಡರ್ (P.C. Gaddigowder)
9. ರಾಯಚೂರು – ರಾಜಾ ಅಮರೇಶ್ವರ ನಾಯಕ್ (Raja Amareshwara Naik)
10. ಕೊಪ್ಪಳ – ಕರಡಿ ಸಂಗಣ್ಣ (Karadi Sanganna)
11. ದಕ್ಷಿಣ ಕನ್ನಡ – ನಳಿನ್ಕುಮಾರ್ ಕಟೀಲ್ (Nalin kumar Kateel)
12. ದಾವಣಗೆರೆ – ಜಿ.ಎಂ. ಸಿದ್ದೇಶ್ವರ್ (G.M.Siddeshwar)
13. ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ (Shobha Karandlaje)
14. ಬೀದರ್ – ಭಗವಂತ ಖೂಬಾ (Bhagwanth Khuba )
ಹೀಗೆ ಮೊದಲ ಪಟ್ಟಿಯಲ್ಲಿ 14 ಮಂದಿಯ ಹೆಸರನ್ನು ಅಂತಿಮ ಮಾಡಿಕೊಳ್ಳಲಾಗಿದೆ. ಇನ್ನು ಜೆಡಿಎಸ್ (JDS) ಗೆ ಹಂಚಿಕೆ ಮಾಡಬೇಕಾಗಿರುವ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ.






