ಎಲ್ಲಾ ಬಾರಿಯೂ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ, ಜನರು ಎಚ್ಚೆತ್ತುಕೊಂದಿದ್ದಾರೆ ಜನರ ಪರವಾಗಿ ಯಾರಿದ್ದಾರೆ ಅವರಿಗೆ ಮತ ನೀಡ್ತಾರೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ(YathindraSiddaramaiah) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕ್(Pakistan) ಪರ ಘೋಷಣೆ ಕೂಗಿದ ಆರೋಪದ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ(BJP) ಯವರಿಗೆ ಯಾವುದೇ ವಿಚಾರಗಳಿಲ್ಲ. ಲೋಕಸಭಾ(Loka Saba) ಚುನಾವಣೆ ಬಂದಾಗ ಪಾಕಿಸ್ತಾನ, ಭಯೋತ್ಪಾದನೆ ವಿಚಾರಗಳನ್ನು ಮುಂದಿಟ್ಟು ವೋಟ್ ತೆಗೆದುಕೊಳ್ಳಲು ಮುಂದಾಗ್ತಾರೆ. ಕೆಲ ಮಾಧ್ಯಮಗಳು(Media), ರಿಪೋರ್ಟರ್(Reporters)ಗಳು ಆ ರೀತಿ ಕೂಗಿಲ್ಲ ಎಂದು ಹೇಳ್ತಿದ್ದಾರೆ. ಆದರೂ ಬಿಜೆಪಿಯವರು ಇದನ್ನು ಆರೋಪ ಮಾಡ್ತಿದ್ದಾರೆ. ಇಷ್ಟಾದರೂ ಸರ್ಕಾರ FSL ವರದಿಗೆ ಕಳುಹಿಸಿದೆ.
ದೇವಸ್ಥಾನದ ಹಣವನ್ನು ಚರ್ಚ್, ಮಸೀದಿಗೆ ಕೊಡ್ತಿದ್ದಾರೆ ಅಂತ ಸುಳ್ಳು ಹೇಳ್ತಿದ್ರು. ಕೆಲ ಮಾಧ್ಯಮಗಳು ಕೂಡ ಇದದೇ ಸುಳ್ಳನ್ನೇ ಹೇಳ್ತಿವೆ.
ಚುನಾವಣೆ ವೇಳೆ ಭಯೋತ್ಪಾದನೆ, ಪಾಕಿಸ್ತಾನ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಎಲ್ಲಾ ಬಾರಿಯೂ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಂದಿದ್ದಾರೆ ಜನರ ಪರವಾಗಿ ಯಾರಿದ್ದಾರೆ ಅವರಿಗೆ ಮತ ನೀಡ್ತಾರೆ ಎಂದರು.
#YathindraSiddaramaiah #Congress #FSLreport #Siddaramaiah #BJPKarnataka
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!
ಭಾರತವು ಶರಣಾರ್ಥಿಗಳ ವಿಷಯದಲ್ಲಿ ಕ್ರೂರ ರಾಷ್ಟ್ರವೂ ಅಲ್ಲ, ಎಲ್ಲರಿಗೂ ಬಾಗಿಲು ತೆರೆದ ಧರ್ಮಶಾಲೆಯೂ ಅಲ್ಲ. ಅದು ತನ್ನ ಇತಿಹಾಸ, ಭೌಗೋಳಿಕ ಸವಾಲುಗಳು ಮತ್ತು ಆಂತರಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು,...
Read moreDetails











