ಲೋಕಸಭೆ(Loka Saba)ಯಲ್ಲಿ ನಮಗೆ ಎಷ್ಟು ಸೀಟ್(Seat) ಕೊಡುತ್ತಾರೆ ಎಂಬ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ಆಗ್ತಿದೆ, ಚುನಾವಣೆಯಲ್ಲಿ ಒಟ್ಟಾಗಿ ಹೋಗಿ ರಾಜ್ಯ(State)ದಿಂದ ಹೆಚ್ಚಿನ ಸ್ಥಾನಗಳನ್ನು ಮೋದಿ ಅವರಿಗೆ ಕೊಡುವ ಕೆಲಸ ಮಾಡುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಹೇಳಿದ್ದಾರೆ.
ಬಿಜೆಪಿ(BJP)ಯ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಹಾಸನ(Hassan)ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಲಿಸ್ಟ್‌ನಲ್ಲಿ 195 ಅಭ್ಯರ್ಥಿಗಳ(Candidates) ಪಟ್ಟಿ ರಿಲೀಸ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡ್ತಾರೆ. ನಮ್ಮದು ಅಂತಿಮವಾಗಿ ತೀರ್ಮಾನ ಆಗುವ ಹಂತದಲ್ಲಿದೆ. ಕುಮಾರಣ್ಣ ಕೂಡ ಮಾತುಕತೆ ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕದ ಅಭ್ಯರ್ಥಿಗಳನ್ನು ಕೆಲವೇ ವಾರಗಳಲ್ಲಿ ರಿಲೀಸ್ ಮಾಡಲಿದ್ದು, ಚುನಾವಣೆಯಲ್ಲಿ ಒಟ್ಟಾಗಿ ಹೋಗಿ ರಾಜ್ಯದಿಂದ ಹೆಚ್ಚಿನ ಸ್ಥಾನಗಳನ್ನು ಮೋದಿ ಅವರಿಗೆ ಕೊಡುವ ಕೆಲಸ ಮಾಡುತ್ತೇವೆ. ನಮಗೆ ಎಷ್ಟು ಸೀಟ್ ಎಂಬ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ಆಗ್ತಿದೆ, ಅವರು ಎಷ್ಟು ಸೀಟಾದ್ರೂ ಕೊಡಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಬಿಜೆಪಿ(BJP) ಪಕ್ಷದ ಅಭ್ಯರ್ಥಿಗಳು ಎಲ್ಲೆಲ್ಲಿ ನಿಲ್ತಾರೆ, ಅಲ್ಲಿರುವ ನಮ್ಮ ಕಾರ್ಯಕರ್ತರೆಲ್ಲ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡ್ತಾರೆ ಎಂದರು.

ಬಾಂಬ್ ಬ್ಲಾಸ್ಟ್ ಬಗ್ಗೆ ಸಚಿವ(Minister) ಶರಣ ಪ್ರಕಾಶ್ ಪಾಟೀಲ್(Sharana Prakash Patil) ಹೇಳಿಕೆಯನ್ನು ಸಂಸದ ಪ್ರಜ್ವಲ್ ರೇವಣ್ಣ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಅವರು ಮಾಡಿದ್ದಾರೆ, ಇವರು ಮಾಡಿದ್ದಾರೆ ಎಂದು ಬೊಟ್ಟು ಮಾಡಿ ತೋರಿಸುವುದಲ್ಲ. ಒಂಭತ್ತು ಜನಕ್ಕೆ ಗಾಯಗಳಾಗಿವೆ, ರಾಜಕೀಯ ಇರಲಿ, ಇಲ್ಲದೇ ಇಲ್ಲದಿರಲಿ, ಯಾರೇ ತಪ್ಪಿತಸ್ಥರಿರಲಿ ಅವರಿಗೆ ಶಿಕ್ಷೆ ಆಗಬೇಕು. ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕರು ಸುಭದ್ರವಾಗಿ ಬದುಕಬೇಕು. ಕೇಂದ್ರ ಹಾಗೂ ರಾಜ್ಯ ಇದರ ಬಗ್ಗೆ ಗಮನ ಹರಿಸಬೇಕು, ಅವರು ತಪ್ಪು ಮಾಡಿದ್ದಾರೆ, ಇವರು ತಪ್ಪು ಮಾಡಿದ್ದಾರೆ ಎನ್ನುತ್ತಿದ್ದಾರೆ. ಆದರೆ ಇದರಲ್ಲಿ ನೋವು ಅನುಭವಿಸುತ್ತಿರುವುದು ಜನರು, ಈ ಹೇಳಿಕೆಗಳನ್ನು ಖಂಡಿಸುತ್ತೇನೆ. ಈ ರೀತಿ ಹೇಳಿಕೆ ನೀಡುವ ಬದಲು ಗಾಯಗೊಂಡಿರುವ ಕುಟುಂಬಗಳು ನೋವಿನಲ್ಲಿವೆ, ರಾಜ್ಯದಲ್ಲಿ ಜನರು ಭಯಭೀತರಾಗಿದ್ದಾರೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದರು.
#Lokasaba #MPelection #PrajwalRevanna #Hassan #MPticket






