ವಿಧಾನಸೌಧದಲ್ಲಿ ಪಾಕಿಸ್ತಾನ್(Pakistan) ಜಿಂದಾಬಾದ್(Zindabaadh) ಘೋಷಣೆ ವಿಷಯದಲ್ಲಿ ಬಿಜೆಪಿಯವರಿಗೆ ಕ್ರಮ ಬೇಕಿಲ್ಲ, ಇಶ್ಯೂ(Issue) ಬೇಕಿದ್ದು, ಮುಂದೆ ನಡೆಯುವ ಎಂಪಿ ಚುನಾವಣೆ(Election)ಗೆ ಇದನ್ನೇ ಪ್ರಮುಖ ವಿಚಾರವಾಗಿ ತೆಗೆದುಕೊಂಡಿದ್ದಾರೆ ಎಂದು ಸಚಿವ(Minister) ಎನ್.ಚಲುವರಾಯಸ್ವಾಮಿ(Cheluvarayaswamy) ಹೇಳಿದರು.
ಮಂಡ್ಯ(Mandya)ದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಎಂದು ಯಾರೆ ಹೇಳಿದ್ರೆ ಸಹಿಸುವ ಪ್ರಶ್ನೆ ಇಲ್ಲ. ಇದರಲ್ಲಿ ರಾಜಕಾರಣ ಬೆರಸುವ ವಿಚಾರ ಸರಿ ಅಲ್ಲ. ಯಾವುದೇ ವ್ಯಕ್ತಿ, ಪಾರ್ಟಿ ಇರಲಿ ದೇಶ, ಭಾಷೆ, ನೆಲದ ವಿಚಾರ ಬಂದ್ರೆ ರಾಜಿಯಾಗುವ ಪ್ರಶ್ನೆ ಇಲ್ಲ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಆದರೆ ಬಿಜೆಪಿ ಅವರು ಇದನ್ನೇ ಲೋಕಸಭಾ ಚುನಾವಣೆಗೆ ಪ್ರಮುಖ ವಿಚಾರವಾಗಿ ತೆಗೆದುಕೊಂಡಿದ್ದು, ಮೊದಲು ಇದನ್ನು ಬಿಜೆಪಿಯವರು ಬಿಡಬೇಕು. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮಕೈಗೊಳ್ಳುತ್ತೆ ಎಂದರು.

ರಾಜ್ಯದಲ್ಲಿ ಕುಡಿಯುವ ನೀರಿನ(Drinking Water) ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಇದೆ. ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಬೋರ್ ವೆಲ್(Borewell), ಟ್ಯಾಂಕರ್(Tanker) ಮೂಲಕ ನೀರು ಒದಗಿಸುವ ಕೆಲಸ ಮಾಡ್ತೇವೆ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ನಿಭಾಯಿಸುವ ಕೆಲಸ ಮಾಡುತ್ತೆ ಎಂದು ಹೇಳಿದರು.
ಎಂಪಿ ಚುನಾವಣೆಗೆ ಸ್ಟಾರ್ ಚಂದ್ರು ಮಂಡ್ಯ ಕಣಕ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೂಡ ಹೊಸ ಮುಖನೇ. ನನಗೂ ಪರಿಚಯ ಇರಲಿಲ್ಲ. ಸ್ಟಾರ್ ಚಂದ್ರು ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಪಕ್ಷಕ್ಕಾಗಿ ದುಡಿದ್ದಿದ್ದಾರೆ. ಚಂದ್ರುರ ಅಣ್ಣ ಗೌರಿಬಿದನೂರಲ್ಲಿ ಶಾಸಕರಾಗಿ ನಮ್ಮ ಜೊತೆ ಇದ್ದಾರೆ. ಕಾಂಗ್ರೆಸ್ ನಿಂದಲೇ ಟಿಕೆಟ್ ಕೊಡಬೇಕಿತ್ತು. ಆದ್ರೆ ಹಿರಿಯ ನಾಯಕರು ಇದ್ರು ಆಗಾಗಿ ಟಿಕೆಟ್ ಕೈ ತಪ್ಪಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ನಮ್ಮ ಜೊತೆ ಇದ್ದಾರೆ. ನಮ್ಮ ಪಕ್ಷಕ್ಕೆ ಅವರ ಕುಟುಂಬ ಸಪೋರ್ಟ್ ಮಾಡಿದೆ ಎಂದರು.
#Mandya #Cheluvarayaswamy #Congress #Minister #LokaSaba