ಲೋಕ ಸಮರಕ್ಕೂ ಮುನ್ನ ಎದುರಾಗಿರುವ ರಾಜ್ಯಸಭಾ (Rajyasabha) ಚುನಾವಣೆಯಲ್ಲಿ ತಂತ್ರಗಾರಿಕೆ ನಡೆಸಲು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ( BY Vijayendra) ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಬೆಂಗಳೂರಿನಲ್ಲಿAದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ವಿಜಯೇಂದ್ರ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್(JDS) ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ನಿಟ್ಟಿನಲ್ಲಿನ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.
ಇದೇ ಫೆಬ್ರವರಿ 27 ಕ್ಕೆ ಕರ್ನಾಟಕದ ನಾಲ್ಕು ಸ್ಥಾನಗಳಿಗೆ ರಾಜ್ಯಸಭೆಗೆ ಚುನಾವಣೆ ನಡೆಯಲಿದೆ, ಬಿಜೆಪಿ 66 ಶಾಸಕರು ಹಾಗೂ ಜೆಡಿಎಸ್ 19 ಶಾಸಕರ ಒಟ್ಟು ಬಲಾಬಲ 85 ಆಗಿದ್ದು, 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಲೆಕ್ಕಾಚಾರಕ್ಕೆಸಡ್ಡು ಹೊಡೆಯಲು ಕಾರ್ಯತಂತ್ರ ರೂಪಿಸಲಾಯಿತು.
ಮೈತ್ರಿ ಪಕ್ಷದ ಅಭ್ಯರ್ಥಿ ಡಿ.ಕುಪೇಂದ್ರ ರೆಡ್ಡಿ (D Kupendra Reddy) ಆಯ್ಕೆಗೆ ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ, ಕೆಲವೇ ದಿನಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಸೋಲು ಕಾಂಗ್ರೆಸ್ ಉತ್ಸಾಹ ಹೆಚ್ಚಿಸಿದೆ, ಇನ್ನೊಂದೆಡೆ ಲೋಕಸಭೆ ಚುನಾವಣೆಯ ಗುಂಗಿನಲ್ಲಿರುವ ಬಿಜೆಪಿ ರಾಜ್ಯಸಭೆಯಲ್ಲು ತಮ್ಮ ಅಭ್ಯರ್ಥಿಗಾಗಿ ಕಸರತ್ತು ನಡೆಸಿದೆ.
ಇನ್ನು ಬಿ.ವೈ. ವಿಜಯೇಂದ್ರ ನಡೆಸಿದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ (Radha Mohandas Agarwal) ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಜರಿದ್ದರು.
#RajyaSabhaElection #BJP #Congress #JDS #KupendraReddy #BYVijayendra #Candidates #FourSeats #Karnataka #politics