ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಡಾ.ಸಿ.ಎನ್. ಮಂಜುನಾಥ್(CN Manjunath) ಅವರ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ(Former Minister) ಸಿ.ಎಸ್. ಪುಟ್ಟರಾಜು(CS Puttaraju) ತಿಳಿಸಿದ್ದಾರೆ.
ಡಾ.ಮಂಜುನಾಥ್ ವಿರುದ್ಧ ತನಿಖೆಗೆ ಸರ್ಕಾರ ಚಿಂತನೆ ಮಾಡಿದೆ ಎಂಬ ವಿಚಾರದ ಕುರಿತು ಮಂಡ್ಯದಲ್ಲಿ ಮಾತನಾಡಿದ ಸಿ.ಎಸ್. ಪುಟ್ಟರಾಜು,
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಮಂಜುನಾಥ್ ಅವ್ರ ಬಳಿ ಕ್ಷಮೆ ಕೇಳಬೇಕು. ಆರೋಗ್ಯ ಕ್ಷೇತ್ರದಲ್ಲಿ ಮಂಜುನಾಥ್ ಬಡವರ ಪರವಾಗಿ ಕೆಲಸ ಮಾಡಿದ್ದಾರೆ. ಪಾರದರ್ಶಕವಾಗಿ ಜಯದೇವ ಆಸ್ಪತ್ರೆಯನ್ನ ನಡೆಸಿ, ಧರ್ಮಸ್ಥಳದ(Darmastala) ಮಂಜುನಾಥನ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ತನಿಖೆಗೆ ಮುಂದಾದರೆ ಕಾಂಗ್ರೆಸ್ಸಿಗರಿಗೆ ದೇವರು ಒಳ್ಳೆಯದು ಮಾಡೋದಿಲ್ಲ ಎಂದು ಟೀಕಿಸಿದರು.
ಸರ್ಕಾರದ ಈ ನಿರ್ಧಾರದ ಹಿಂದೆ ನೂರಕ್ಕೆ ನೂರರಷ್ಟು ರಾಜಕೀಯ ದುರುದ್ದೇಶ ಇದೆ. ಮಂಜುನಾಥ್ ವಿರುದ್ಧ ತನಿಖೆಗೆ ಮುಂದಾದರೆ ಜನರು ಧಂಗೆ ಏಳುತ್ತಾರೆ. ಹೃದಯವನ್ನ ಸರಿಪಡಿಸಿಕೊಂಡಿರುವ ಕುಟುಂಬಸ್ಥರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಜಯದೇವ ಆಸ್ಪತ್ರೆ 10 ವರ್ಷ ಹಿಂದೆ ಹೇಗಿತ್ತು ಎಂಬುದನ್ನ ಕಾಂಗ್ರೆಸಿನವರು ತಿಳಿದುಕೊಳ್ಳಬೇಕು. ಕಾಂಗ್ರೆಸಿಗರಿಗೆ ಜಯದೇವ ಆಸ್ಪತ್ರೆಯ ಅಭಿವೃದ್ಧಿ ಕಾಣುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಮಂಜುನಾಥ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವತ್ತು ಅವರಿಗೆ ಅದೆಲ್ಲಾ ಮರೆತೋಯ್ತಾ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯನವರು ಪುನರ್ ವಿಮರ್ಶೆ ಮಾಡಬೇಕು. ಜನರು ದಡ್ಡಯಲ್ಲ, ಇದ್ಯಾವುದೂ ನಡೆಯೋದಿಲ್ಲ. ಮಂಡ್ಯದಲ್ಲಿ ಮಂಜುನಾಥ್ ಅವ್ರು ಸ್ಪರ್ಧೆ ಮಾಡಿದ್ರೆ ಪಕ್ಷಾತೀತವಾಗಿ ಜನ ಗೆಲ್ಲಿಸ್ತಾರೆ ಎಂದರು.
#JayadevaHospital #DrCNManjunath #CSPuttaraju #Congress
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್
ಬೆಳಗಾವಿ: ಬೆಂಗಳೂರು ಮೈಸೂರು ಇನ್ಸ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್(Supreme Court) ಆದೇಶ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಯೋಜನೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು...
Read moreDetails











