ಮಂಡ್ಯ(Mandya) ಲೋಕಸಭಾ(LokaSaba) ಕ್ಷೇತ್ರದ ಜೆಡಿಎಸ್(JDS) ಅಭ್ಯರ್ಥಿ ವಿಚಾರ ದೊಡ್ಡಮಟ್ಟದ ಕುತೂಹಲ ಮೂಡಿಸಿರುವ ಬೆನ್ನಲ್ಲೇ, ಸಕ್ಕರೆನಾಡಿನ ಜಾ.ದಳದ ನಾಯಕರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ(HDDevegowda) ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದರು.

ಬೆಂಗಳೂರಿನ(Bangalore) ಪದ್ಮನಾಭನಗರ(Padmanabnagar)ದಲ್ಲಿರುವ ಎಚ್.ಡಿ. ದೇವೇಗೌಡರ ನಿವಾಸಕ್ಕೆ ತೆರಳಿದ ಮಂಡ್ಯ(Mandya) ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಇತರ ನಾಯಕರು ಲೋಕಸಭಾ(LokaSaba) ಚುನಾವಣೆಯಲ್ಲಿ ಯಾರನ್ನ ಅಭ್ಯರ್ಥಿ ಮಾಡಬೇಕು ಎಂದು ಚರ್ಚೆ ನಡೆಸಿದರು. ಇದೇ ವೇಳೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತಂತೆ ನಿಖಿಲ್ ಕುಮಾರಸ್ವಾಮಿ(NikhilKumarswamy) ಅವರ ಮನವೊಲಿಸುವ ಪ್ರಯತ್ನ ನಡೆಸಿದರಲ್ಲದೇ, ಸ್ಪರ್ಧೆ ನಿರಾಕರಿಸಿರುವ ನಿಖಿಲ್ ಮನವೊಲಿಸುವಂತೆ ದೇವೇಗೌಡರ ಬಳಿ ಜೆಡಿಎಸ್(JDS) ನಾಯಕರು ಮನವಿ ಮಾಡಿದರು.

ಮಹತ್ವದ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ(GTDevegowda), ಎಚ್.ಟಿ.ಮಂಜು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
#JDS #Mandya #HDDevegowda #LokaSaba #Election #NikhilKumar