ಕನ್ನಡದಲ್ಲೇ CAPF ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು BJP ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(Vijayendra) ಸ್ವಾಗತಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ‘ಮೋದಿ ಜೀ ಸರ್ಕಾರದಿಂದ ಮಾತೃಭಾಷೆಗಳಿಗೆ ಆದ್ಯತೆ’ ಇದೇ ಮೊದಲ ಬಾರಿಗೆ ಕೇಂದ್ರ ಸಶಕ್ತ ಪೊಲೀಸ್ ಪಡೆಗಳಲ್ಲಿನ ಕಾನ್ಸ್ಟೇಬಲ್ ಗಳ ನೇಮಕಾತಿ ಪರೀಕ್ಷೆಯನ್ನು ಕನ್ನಡ ಭಾಷೆ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರದ(Centerl Government) ನಿರ್ಧಾರ ಅಭಿನಂದನೀಯ.
ಈ ಮಹತ್ವದ ನಿರ್ಧಾರ ಆಕಾಂಕ್ಷಿತ ನಿರುದ್ಯೋಗಿ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸಹಕಾರಿಯಾಗಿದ್ದು, ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದರಿಂದ ಗ್ರಾಮೀಣ ಪ್ರದೇಶದ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶ ಲಭಿಸಲಿದೆ. ಕನ್ನಡಿಗರ ಬೇಡಿಕೆಗೆ ಅಸ್ತು ಎಂದಿರುವ ಪ್ರಧಾನಿ Narendramodi ಜೀ ಸರ್ಕಾರ, ತನ್ನ ಕನ್ನಡ ಬದ್ಧತೆಯನ್ನು ಪ್ರಶ್ನೆ ಮಾಡುತ್ತಿದ್ದ ಮುಖ್ಯಮಂತ್ರಿ Siddaramaiah ಅವರಿಗೆ ಸೂಕ್ತ ರೀತಿಯಲ್ಲೇ ಮಾರುತ್ತರ ನೀಡಿದೆ ಎಂದಿದ್ದಾರೆ.
#CAPFexam #Policeman #Constable #BYVijayendra #BJPKarnataka