ಮದವೇರಿದ ಕಾಡಾನೆಯೊಂದ(Elephant) ಅರಣ್ಯ ರಕ್ಷಕರು(Forest Guards) ಹಾಗೂ ಆರ್‌ಆರ್‌ಟಿ(RRT) ಸಿಬ್ಬಂದಿ ಮೇಲೆ ದಾಳಿ(Attack) ನಡೆಸಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಡಗಿನ(Kodagu) ಕೋವರ್ ಕೊಲ್ಲಿ ಟಾಟಾ(TATA) ಎಸ್ಟೇಟ್‌ನಲ್ಲಿ ಕಾಡಾನೆ ಇರುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಕೋವರ್ ಕೊಲ್ಲಿ ಟಾಟಾ ಎಸ್ಟೇಟ್‌ನಲ್ಲಿದ್ದ ಕಾಡಾನೆ ಬಗ್ಗೆ ಮಾಹಿತಿ ದೊರೆತ ಮೇರೆಗೆ ಸ್ಥಳಕ್ಕೆ ತೆರಳಿದ ಆರ್.ಆರ್.ಟಿ ತಂಡದ ದರ್ಶನ್, ಹರ್ಷಿತ್, ವಿನೋದ್ ಹಾಗೂ ಅರಣ್ಯ ರಕ್ಷಕರಾದ ಶ್ರೀಕಾಂತ್ ಅವರನ್ನು ಕಾಡಾನೆ ಬೆನ್ನಟ್ಟಿದೆ. ಈ ವೇಳೆ ಕಾಡಾನೆ ದಾಳಿಯಿಂದ ಪಾರಾಗಲು ಯತ್ನಿಸಿದ ಸಂದರ್ಭದಲ್ಲಿ ಅಟ್ಟಿಸಿಕೊಂಡು ಬಂದ ಕಾಡಾನೆ, ಸಿಬ್ಬಂದಿಯ ಬೈಕ್ ಜಖಂಗೊಳಿಸಿದ್ದು, ಟಾಟಾ ಎಸ್ಟೇಟ್ ಗೇಟ್ ಮುರಿದು ಅರಣ್ಯ ಪ್ರವೇಶಿದೆ. ಆದರೆ ಅದೃಷ್ಟವಶಾತ್ ಅರಣ್ಯ ಇಲಾಖೆ ಸಿಬ್ಬಂದಿ ಮದವೇರಿದ ಕಾಡಾನೆಯಿಂದ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
#ElephantAttack #ForestGuards #Kodagu #RRT #TATA
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಚಿವರು ಹಾಗೂ ಶಾಸಕರು ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಈ ಬಣ...
Read moreDetails











