ಗದಗ: ಜಿಲ್ಲಾಸ್ಪತ್ರೆಯಲ್ಲಿ ಡ್ಯೂಟಿ ಸಮಯದಲ್ಲಿ ರೀಲ್ಸ್(Reels) ಮಾಡುತ್ತಿದ್ದ ಜಿಲ್ಲಾಸ್ಪತ್ರೆಯ(District Hospital) 38 ವೈದ್ಯಕೀಯ(Medical) ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಜಿಮ್ಸ್ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಗದಗದ ಜಿಲ್ಲಾಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ವಿದ್ಯಾರ್ಥಿಗಳು. ಆಸ್ಪತ್ರೆ ಕಾರಿಡಾರ್‌ನಲ್ಲಿ ಸ್ಟೂಡೆಂಟ್ಸ್ ಮಾಡಿದ್ದ ರೀಲ್ಸ್ ಸಾಕಷ್ಟು ವೈರಲ್(Viral) ಕೂಡ ಆಗಿತ್ತು. ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಮಾಡಿದ್ದ ರೀಲ್ಸ್‌ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ರು. ಈ ಬಗ್ಗೆ ವರದಿ ಆಗ್ತಿದ್ದ ಹಾಗೆ ಎಚ್ಚೆತ್ತ ಜಿಮ್ಸ್ ನಿರ್ದೇಶಕರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ.
ಅಮಾನತು ಬಗ್ಗೆ ಜೀಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿರುವುದು ದೊಡ್ಡ ಅಪರಾಧವೇ ಸರಿ. ರೋಗಿಗಳಿಗೆ ಅನಾನುಕೂಲ ಆಗೋ ರೀತಿ ರೀಲ್ಸ್ ಮಾಡಿರೋದು ಖಂಡಿತ ಸರಿಯಲ್ಲ. ರೀಲ್ಸ್ ಮಾಡಿರೋ ಎಲ್ಲರೂ MBBS ಪೂರ್ಣಗೊಳಿಸಿ ಹೌಸ್ ಮೆನ್‌ಶಿಪ್‌ನಲ್ಲಿದ್ದಾರೆ. ಈ ರೀತಿಯ ರೀಲ್ಸ್ ವಿಡಿಯೋ ಮಾಡೋದಕ್ಕೆ ನಾವು ಯಾರಿಗೂ ಅನುಮತಿ ಕೊಟ್ಟಿಲ್ಲ. ಯಾರೇ ಇರಲಿ, ಆಸ್ಪತ್ರೆಯಲ್ಲಿ ಈ ರೀತಿ ಮಾಡಿದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ 5 ವರ್ಷ MBBS ಮುಗಿಸಿ, ಒಂದು ವರ್ಷ ಡಾಕ್ಟರ್ ಆಗಿಯೂ ಕೆಲಸ ಮಾಡಿರುವ 38 ವೈದ್ಯಕೀಯ ವಿದ್ಯಾರ್ಥಿಗಳು ಕೇವಲ 15 ದಿನದಲ್ಲಿ ಅಧಿಕೃತ ವೈದ್ಯರಾಗಿ ಹೊರ ಬರಬೇಕಿತ್ತು. ಗ್ರಾಜ್ಯುಯೇಷನ್ ಡೇ ಕೂಡ ನಿಗದಿಯಾಗಿತ್ತು. ಈ ನಡುವೆ ಅಮಾನತು ಆಗಿರುವುದು ದುರಾದೃಷ್ಟಕರ. ಸಾಮಾಜಿಕ ಜಾಲತಾಣಗಳಿಂದ ಪ್ರೇರಣೆಗೊಂಡು ವಿಡಿಯೋ ಮಾಡಿರುವ ಡಾಕ್ಟರ್ಸ್, ಸಾಮಾಜಿಕ ಜವಾಬ್ದಾರಿ ಅರಿತು ರೀಲ್ಸ್ ಮಾಡಬೇಕಿತ್ತು. ಆಸ್ಪತ್ರೆಯಲ್ಲಿ ಈ ರೀತಿ ಮಾಡಿರುವುದು ತಪ್ಪು. ಖಾಸಗಿಯಾಗಿ ಹೊರಗೆ ಮಾಡಿಕೊಂಡಿದ್ದರೆ ಏನೂ ಆಗ್ತಿರಲಿಲ್ಲ ಎನ್ನುವ ಅಭಿಪ್ರಾಯ ಕೇಳಿಬಂದಿದೆ.
#Gadaga #Hospital #MedicalStudents #Reels #ViralVideo











