ಸ್ಯಾಂಡಲ್‌ವುಡ್(Sandalwood)ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shiva Rajkumar) ಹಾಗೂ ಪ್ರಭುದೇವ (Prabhudeva) ಅಭಿನಯದ “ಕರಟಕ ದಮನಕ” ಚಿತ್ರದ ಮತ್ತೊಂದು ಹಾಡು ಫೆ.10ರಂದು ರಿಲೀಸ್ ಆಗಲಿದೆ.

ಯೋಗರಾಜ್ ಭಟ್(Yogaraj Bhat) ನಿರ್ದೇಶನ ಹಾಗೂ ರಾಕ್‌ಲೈನ್ ವೆಂಕಟೇಶ್(Rockline Venktesh) ನಿಮಾರ್ಣದಲ್ಲಿ ಮೂಡಿ ಬರುತ್ತಿರುವ ಶಿವಣ್ಣ ಹಾಗೂ ಪ್ರಭುದೇವ ಕಾಂಬಿನೇಷನ್‌ನ ಈ ಸಿನಿಮಾದ ಒಂದು ಹಾಡು ಈಗಾಗಲೇ ರಿಲೀಸ್ ಆಗಿದ್ದು ಎಲ್ಲೆಡೆ ಸದ್ದು ಮಾಡುತ್ತಿದೆ. ಇದರ ನಡುವೆಯೇ ಇದೇ ಚಿತ್ರದ ʻಡೀಗ ಡಿಗರಿʼ ಹಾಡು ಬಿಡುಗಡೆಯಾಗುತ್ತಿರುವುದು ಸಿನಿಪ್ರಿಯರ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಈ ಬಗ್ಗೆ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕರಟಕ ದಮನಕ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಜೋಡಿ ಇದೇ ಮೊದಲ ಬಾರಿಗೆ ಒಟ್ಟಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಎಲ್ಲರ ನಿರೀಕ್ಷೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಇದ್ದು, ಬಹುನಿರೀಕ್ಷಿತ ಈ ಚಿತ್ರ ಮಾರ್ಚ್ 8ರಂದು ಬಿಡುಗಡೆಯಾಗಲಿದೆ.
#KaratakaDamanaka #Shivanna #Prabhudeva #RocklineVenktesh #YogarajBhat