ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್(BIG Boss) ಸೀಸನ್ 10 ರ ಕಿರೀಟವನ್ನ ನಟ ಕಾರ್ತಿಕ ಮಹೇಶ್ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಫಿನಾಲೆಯಲ್ಲಿ ಕಾರ್ತಿಕ್ ಮಹೇಶ್ ವಿಜಯಶಾಲಿ ಆಗಿದ್ದಾರೆ. ಡ್ರೋನ್ ಪ್ರತಾಪ್(Drone Prathap) ರನ್ನರ್ ಅಪ್ ಆಗಿದ್ದಾರೆ. ಹಾಗೆಯೇ ನಟಿ ಸಂಗೀತಾ ಶೃಂಗೇರಿ(Sangetha Sringeri) ಸೆಕೆಂಡ್ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಡ್ರೋನ್ ಪ್ರತಾಪ್ ಹಾಗೂ ಸಂಗೀತ ಸೃಂಗೇರಿ ನೀಡಿದ ಟಫ್ ಕಾಂಪಿಟೇಷನ್ ನಡುವೆಯೂ ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾರ್ತಿಕ್ಗೆ ಅಭಿನಂದನೆಗಳ ಸುರಿಮಳೆಗೈಯ್ಯಲಾಗ್ತಿದೆ.
ನಟ ಕಾರ್ತಿಕ್ ಮಹೇಶ್ ಮೂಲತಃ ಮೈಸೂರಿನವರಾಗಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಮುಗಿಸಿದ್ದಾರೆ. ನಟನಾಗುವ ಆಸೆಯಿಂದ ಬೆಂಗಳೂರಲ್ಲಿ ಬಂದು ನೆಲೆಸಿದ್ದಾರೆ. ಮಾಡಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಜೇತ ಕಾರ್ತಿಕ್ಗೆ 50 ಲಕ್ಷ ಹಣ ಹಾಗೂ ಮಾರುತಿ ಸುಜುಕಿ ಕ್ರೆಟಾ ಕಾರು ಸೇರಿದಂತೆ ಉಡುಗೊರೆಯ ಮಹಾಪೂರವೇ ಹರಿದುಬರ್ತಿದೆ. ಈ ಬಾರಿಯ ಸೀಸನ್ 10 ಬಿಗ್ಬಾಸ್ ಸಾಕಷ್ಟು ವಿವಾದ ಹಾಗೂ ಕಾಂಪಿಟೇಷನ್ನಿಂದ ಕೂಡಿತ್ತು. ಎಲ್ಲ ಸ್ಪರ್ಧಿಗಳು ಸಾಕಷ್ಟು ಕೌಂಟರ್ ಅಟ್ಯಾಕ್ ನಡೆಸಿ ಗೆಲುವಿಗೆ ಶ್ರಮಿಸಿದ್ದರು. ಅಂತಿಮವಾಗಿ ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ. ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾರ್ಯಕ್ರಮದ ನಿರೂಪಕ ನಟ ಕಿಚ್ಚ ಸುದೀಪ್ ಕಾರ್ತಿಕ್ ಕೈ ಎತ್ತುತ್ತಿದ್ದ ಹಾಗೆ ಎಲ್ಲರೂ ಸಂತೋಷದಿಂದ ಸಂಭ್ರಮಿಸಿದ್ದಾರೆ.