ನವದೆಹಲಿ: ಆಧಾರ್ ಕಾರ್ಡ್ ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸುವುದಿಲ್ಲ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಸ್ಪಷ್ಟಪಡಿಸಿದ್ದು, ಈ ನಿರ್ಧಾರವನ್ನು ಕೇಂದ್ರ ಭವಿಷ್ಯ ನಿಧಿ ಆಯುಕ್ತರು ಅನುಮೋದಿಸಿದ್ದಾರೆ.
ಆಧಾರ್ ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸುವುದಿಲ್ಲ. ಪ್ರಾಥಮಿಕವಾಗಿ, ಆಧಾರ್ ಕಾರ್ಡ್ ಗುರುತಿನ ಪರಿಶೀಲನೆಯ ಪತ್ರವಾಗಿದೆ. ಅದು ಜನ್ಮ ಪುರಾವೆ ಅಲ್ಲ ಎಂದು ಇಪಿಎಫ್‌ಒ ಸುತ್ತೋಲೆಯಲ್ಲಿ ತಿಳಿಸಿದೆ.

“ಆಧಾರ್ ಗುರುತಿನ ಪುರಾವೆ ಮಾತ್ರವೆಂದು ಯುಐಡಿಎಐನಿಂದ ಪತ್ರವನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಆಧಾರ್ ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ತೆಗೆಯಲು ಹೇಳಲಾಗಿದೆ. ಅದರಂತೆ, ಜೆಡಿ ಎಸ್‌ಒಪಿಯ ಅನುಬಂಧ-1ರ ಟೇಬಲ್-ಬಿಯಲ್ಲಿ ಉಲ್ಲೇಖಿಸಿದಂತೆ ಜನ್ಮ ದಿನಾಂಕದ ತಿದ್ದುಪಡಿಗಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್‌ಅನ್ನು ತೆಗೆದುಹಾಕಲಾಗುತ್ತಿದೆ ಎಂದು ಇಪಿಎಫ್‌ಒ ಹೇಳಿದೆ.
ಈ ದಾಖಲೆ ಮಾತ್ರ ಪರಿಗಣನೆ:
- ಯಾವುದೇ ಮಾನ್ಯತೆ ಪಡೆದ ಸರ್ಕಾರಿ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ನೀಡಿದ ಅಂಕಪಟ್ಟಿ,
- ಎಸ್‌ಎಸ್ಎಲ್‌ಸಿ ಹಾಗೂ ಶಾಲಾ ವರ್ಗಾವಣೆ ಪ್ರಮಾಣಪತ್ರ
- ಸೇವಾ ದಾಖಲೆಗಳ ಆಧಾರದ ಮೇಲಿನ ಪ್ರಮಾಣಪತ್ರ
- ಪಾನ್ ಕಾರ್ಡ್
- ಕೇಂದ್ರ/ರಾಜ್ಯ ಪಿಂಚಣಿ ಪಾವತಿ ಆದೇಶ ಪತ್ರ
- ಸರ್ಕಾರ ನೀಡಿದ ನಿವಾಸ ಪ್ರಮಾಣಪತ್ರ
- ಪಾಸ್‌ಪೋರ್ಟ್
- ಸರ್ಕಾರಿ ಪಿಂಚಣಿ ಪತ್ರ
- ಸಿವಿಲ್ ಸರ್ಜನ್ ನೀಡಿದ ವೈದ್ಯಕೀಯ ಪ್ರಮಾಣಪತ್ರ