ರಾಕಿಂಗ್ ಸ್ಟಾರ್ ಯಶ್ (Yash) ಫ್ಯಾನ್ಸ್ ನ ಸಿಕ್ಕಾಪಟ್ಟೆ ಗೌರವಿಸ್ತಾರೆ. ಅಭಿಮಾನಿಗಳ ಪ್ರೀತಿಗೆ ಮನಸೋಲುತ್ತಾರೆ. ಆದ್ರೆ, ಈ ಬಾರಿ ಬರ್ತ್ ಡೇ ದಿನ ಫ್ಯಾನ್ಸ್ ನ ಮೀಟ್ ಮಾಡದಿರಲು ನಿರ್ಧರಿಸಿದ್ದ ಯಶ್ ಗೆ ದೊಡ್ಡ ಶಾಕ್ ಎದುರಾಗಿತ್ತು. ಮೂವರು ಯಶ್ ಫ್ಯಾನ್ಸ್ ಸಾವನಪ್ಪಿದ್ದರು. ಇದೀಗ
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬ್ಯಾನರ್ ಕಟ್ಟುವಾಗ ಗದಗದಲ್ಲಿ (Gadaga) ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಅಭಿಮಾನಿಗಳ ಕುಟುಂಬಕ್ಕೆ ನೆರವಿನ ಚೆಕ್ ಅನ್ನು ರಾಕಿಂಗ್ ಸ್ಟಾರ್ ತಲುಪಿಸಿದ್ದಾರೆ.

ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರತಿ ಕುಟುಂಬಕ್ಕೂ ತಲಾ 5 ಲಕ್ಷ ರೂಪಾಯಿ ನೀಡಿ ನೆರವಿನ ಹಸ್ತ ಚಾಚಿದ್ದಾರೆ. ಯಶ್ ಅವರು ಸಾಮಾಜಿಕ ಸೇವೆಗಾಗಿ ಸ್ಥಾಪಿಸಿರುವ ಯಶೋಮಾರ್ಗ( Yashomarga) ಫೌಂಡೇಶನ್ ವತಿಯಿಂದ ಮೃತಪಟ್ಟ ಕುಟುಂಬಕ್ಕೆ ನೆರವು ನೀಡಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಹಿಂದಿನ ರಾತ್ರಿ ಕೆಲವು ಯುವಕರು ಬ್ಯಾನರ್ ಕಟ್ಟುತ್ತಿದ್ದರು. ಆ ಸಂದರ್ಭದಲ್ಲಿ ಅಚಾನಕಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟಿದ್ದರು. ಇದೀಗ ಯಶೋಮಾರ್ಗ ಫೌಂಡೇಶನ್ ಕಡೆಯಿಂದ ಯಶ್ ಆಪ್ತರು ಮೃತಪಟ್ಟ ಅಭಿಮಾನಿಗಳಿಗೆ ನೆರವಿನ ಚೆಕ್ ಹಸ್ತಾಂತರ ಮಾಡಿದ್ದಾರೆ.ಯಶ್ ಹುಟ್ಟುಹಬ್ಬದ ಹಿಂದಿನ ದಿನ ರಾತ್ರಿ ಯುವಕರು ಬ್ಯಾನರ್ ಕಟ್ಟುತ್ತಿದ್ದಾಗ ಬ್ಯಾನರ್ ವಿದ್ಯುತ್ ತಂತಿಗೆ ತಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವಿಷಯ ತಿಳಿದ ತಕ್ಷಣ ಯಶ್ ಶೂಟಿಂಗ್ ಕ್ಯಾನ್ಸಲ್ ಮಾಡಿ ಗದಗಕ್ಕೆ ಆಗಮಿಸಿದ್ದರು. ಯಶ್ ಹೃದಯ ಶ್ರೀಮಂತಿಕೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.