ನಟಭಯಂಕರ ವಜ್ರಮುನಿ (Vajramuni) ಅವರ ಹೆಸರು ಯಾರಿಗೆ ತಾನೇ ಗೊತ್ತಿಲ್ಲ, ಈಗ ಅವರ ಹೆಸರಿನಲ್ಲೇ ಚಲನಚಿತ್ರವೊಂದು ನಿರ್ಮಾಣವಾಗಿದೆ. ಆದರೆ ಇದು ಹಿರಿಯನಟ ವಜ್ರಮುನಿ ಅವರ ಜೀವನ ಕಥೆಯಲ್ಲ, ಬದಲಾಗಿ ಕುಡಿತದ ಚಟಕ್ಕೆ ಬಿದ್ದು ದುಷ್ಟವ್ಯಕ್ತಿಯಾಗಿದ್ದ ನಾಯಕ ಹೇಗೆ ಒಳ್ಳೆಯವನಾಗುತ್ತಾನೆ, ತನಗೆದುರಾಗುವ ಕಂಟಕಗಳನ್ನು ಯಾವರೀತಿ ಎದುರಿಸುತ್ತಾನೆ ಎಂಬ ಕಥೆಯೇ ‘ವಜ್ರಮುನಿ’ ( Kannada movie )ಚಿತ್ರ. ಈ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಕಂಚಿನ ಕಂಠ ಹೊಂದಿರುವ ನಟ ವಸಿಷ್ಠ ಸಿಂಹ (Vasista simha) ಅವರು ಬಿಡುಗಡೆ ಮಾಡಿದರು.

ರಾ ಕಂಟೆಂಟ್ ಹೊಂದಿರುವ ಈ ಟೀಸರ್ ರಿಲೀಸಾದ ಒಂದೇ ದಿನಕ್ಕೆ ಮಿಲಿಯನ್ ಗೂ ಹೆಚ್ಚು ವೀಕ್ಷಣೆಯಾಗುವ ಮೂಲಕ ಎಲ್ಲೆಡೆ ವೈರಲ್ ಆಗಿದೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ. ಎಸ್.ಎನ್.ಡಿ. ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಂಪತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಭರತ್ ತೋಪಯ್ಯ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಪ್ರವೀಣ್ ಬೊಮ್ಮಗಟ್ಟ ಸಂಭಾಷಣೆ ಬರೆದಿದ್ದಾರೆ. ಎಲ್.ವಿ.ಎಸ್. ಮ್ಯೂಸಿಕಲ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಶ್ರೀನಿವಾಸ ರಾಜು ಅವರ ಛಾಯಾಗ್ರಹಣ, ಎ.ಆರ್. ಕೃಷ್ಣ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ನಾಯಕನಾಗಿ ನಿರ್ಮಾಪಕ ಸಂಪತ್ ಅವರೇ ಕಾಣಿಸಿಕೊಂಡಿದ್ದಾರೆ. ಯಶ್ ಶೆಟ್ಟಿ, ವಿಕ್ರಾಂತ್, ಸುನಿಲ್ ಹಾಗೂ ಇತರರು ಪ್ರಮುಖ ತಾರಾಗಣದಲ್ಲಿದ್ದಾರೆ.