ಮುಂದಿನ ವರ್ಷದ ಫೆಬ್ರವರಿಯಿಂದ ರಾಜ್ಯದಲ್ಲಿ ಏಕರೂಪದ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರ ಜಾರಿಯಾಗಲಿದೆ.
ಫೆಬ್ರವರಿಯಿಂದ DL ಮತ್ತು RC ಕಾರ್ಡ್‌ಗಳಲ್ಲಿ ಕ್ಯೂ ಆರ್ ಕೋಡ್ ಕೂಡಾ ಇರಲಿದೆ.
ದೇಶದಲ್ಲಿ ಒಂದೇ ರೀತಿಯ DL ಮತ್ತು RC ಕಾರ್ಡ್ ಇರಬೇಕು ಎಂದು 2019ರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿತ್ತು.
ಸ್ಮಾರ್ಟ್ ಕಾರ್ಡ್‌ನಲ್ಲಿ Q R ಕೋಡ್ ಸ್ಕ್ಯಾನ್ ಮಾಡಿದರೆ ಡಿಎಲ್ ಹೊಂದಿರುವವರ ಪೂರ್ಣ ಮಾಹಿತಿ ಸಿಗಲಿದೆ. ಡಿಎಲ್ ಮತ್ತು ಆರ್‌ಸಿ ಕಾರ್ಡ್‌ನಲ್ಲಿ ಇದುವರೆಗೆ ಚಿಪ್ ಮಾತ್ರ ಇತ್ತು. ಕ್ಯೂ ಆರ್ ಕೋಡ್‌ನಿಂದ ಆ ಚಿಪ್‌ನಲ್ಲಿ ಅಡಕವಾಗಿರುವ ಮಾಹಿತಿಯನ್ನು ಸಂಚಾರಿ ಪೊಲೀಸರು ತಪಾಸಣೆ ಮಾಡುವ ವೇಳೆಯೇ ಪಡೆದುಕೊಳ್ಳಬಹುದು.
DLನಲ್ಲಿ ಕಾರ್ಡ್‌ದಾರರ ಹೆಸರು, ಫೋಟೋ, ವಿಳಾಸ, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು, ಮೊಬೈಲ್ ಸಂಖ್ಯೆ, ತುರ್ತು ಸಂಪರ್ಕ ಸಂಖ್ಯೆ ಹೀಗೆ 25 ಮಾಹಿತಿಗಳಿರುತ್ತವೆ.
RC ಸ್ಮಾರ್ಟ್ ಕಾರ್ಡ್ ಮುಂಭಾಗದಲ್ಲಿ ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ, ಮಾನ್ಯತಾ ಅವಧಿ, ಮಾಲೀಕರ ವಿಳಾಸ ಮತ್ತು ವಿವರ ಇರುತ್ತದೆ. ಹಿಂಭಾಗದಲ್ಲಿ ಕ್ಯೂಆರ್ ಕೋರ್ಡ್‌ನೊಂದಿಗೆ ವಾಹನ ತಯಾರಿಕಾ ಕಂಪನಿ ಹೆಸರು, ಮಾಡೆಲ್, ವಾಹನದ ಶೈಲಿ, ವಾಹನದ ಆಸನ ಸಾಮರ್ಥ್ಯ, ಸಾಲ ನೀಡಿದ ಹಣಕಾಸು ಸಂಸ್ಥೆಗಳ ಮಾಹಿತಿ ಇರುತ್ತದೆ.
ಗುಣಮಟ್ಟದ ಹೊಸ ಕಾರ್ಡ್:
ಹೊಸ ಸ್ಮಾರ್ಟ್ ಕಾರ್ಡ್ ಪಾಲಿ ಕಾರ್ಬೋನೇಟ್ ಆಗಿರುತ್ತದೆ, ಮುರಿದು ಹೋಗಲ್ಲ ಮತ್ತು ಕಾರ್ಡ್‌ನಲ್ಲಿರುವ ಮಾಹಿತಿ ಅಳಿಸಿ ಹೋಗಲ್ಲ.