ಮೂರು ರಾಜ್ಯಗಳ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿ.06ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ ಕರೆದಿದ್ದಾರೆ.
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಮೂರರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡ ನಂತರ ವಿಪಕ್ಷಗಳ ಮೈತ್ರಿಕೂಟ I.N.D.I.A ತನ್ನ ಒಕ್ಕೂಟದ ಪಕ್ಷಗಳ ನಾಯಕರಿಗೆ ಡಿಸೆಂಬರ್ 6ರಂದು ನಡೆಯುವ ಸಭೆಗೆ ಆಹ್ವಾನಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಎಂಕೆ, TMC ಸೇರಿದಂತೆ ಮೈತ್ರಿ
ಪಕ್ಷಗಳ ಪ್ರಮುಖ ನಾಯಕರನ್ನು ಸಭೆಗೆ ಆಹ್ವಾನಿಸಿದ್ದಾರೆ. ಈ ಮೈತ್ರಿ ಕೂಟದಲ್ಲಿ ಬಿಜೆಪಿ ವಿರುದ್ಧ 28 ಪಕ್ಷಗಳು ಒಗ್ಗೂಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವಲ್ಲಿ ಒಗ್ಗಟ್ಟಾಗಿ ಹೋರಾಡುವುದು ಈ ಬಣದ ಪ್ರಮುಖ ಗುರಿಯಾಗಿದೆ.
ಕೊನೆಗೂ ಧರ್ಮಸ್ಥಳದ ಗ್ರಾಮದಲ್ಲಿ ಶವಗಳ ಅಸ್ಥಿಪಂಜರ ಪತ್ತೆ ಮಾಡಿದ ಎಸ್ಐಟಿ..
ಧರ್ಮಸ್ಥಳ (Dharmasthala)ದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ್ದ 6ನೇ ಮಾರ್ಕ್‌ನಲ್ಲಿ 2 ಅಸ್ಥಿಪಂಜರಗಳು ಪತ್ತೆಯಾಗಿದೆ ಎಂದು ಎಸ್‌ಐಟಿ (SIT) ಮೂಲಗಳು ತಿಳಿಸಿವೆ. ದೂರುದಾರ...
Read moreDetails