• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ, ಗಂಡಸ್ತರ ಆಡು ; ವಿನಯ್‌ರಿಂದ ಮಹಿಳೆಯರಿಗೆ ಅಪಮಾನ

Any Mind by Any Mind
November 2, 2023
in ಕರ್ನಾಟಕ
0
ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ, ಗಂಡಸ್ತರ ಆಡು ; ವಿನಯ್‌ರಿಂದ ಮಹಿಳೆಯರಿಗೆ ಅಪಮಾನ
Share on WhatsAppShare on FacebookShare on Telegram

ADVERTISEMENT

ಕನ್ನಡ ಕಿರುತೆರೆಯಲ್ಲೇ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 10 ನೇ ಸೀಸನ್ ಮತ್ತೆ ಶುರುವಾಗಿದೆ. ಶುರುವಾದ ದಿನಗಳಿಂದಲೂ ಒಂದಲ್ಲ ಒಂದು ರೀತಿ ಚರ್ಚೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಬಾರಿ ಬಿಗ್ ಬಾಸ್ ಅಭ್ಯರ್ಥಿಗಳ ಭಾಷೆ ತೀರ ಕೆಳಮಟ್ಟದ್ದಾಗಿದ್ದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ, ಗಂಡಸ್ತರ ಆಡು ಎಂಬ ವಿನಯ್‌ ಮಾತಿನಿಂದ ಹೆಣ್ಣು ಮಕ್ಕಳು ಅಲ್ಲದೇ ಅನೇಕ ನೆಟ್ಟಿಗರು ಇದನ್ನು ವಿರೋಧಿಸಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಹಳ್ಳಿಯ ರೀತಿಯಲ್ಲಿ ಸೆಟ್ ನಿರ್ಮಾಣ ಆಗಿದೆ. ಹಳ್ಳಿಯಲ್ಲಿ ನಡೆಯುವ ಚಟುವಟಿಕೆಗಳನ್ನೇ ಆಯ್ದುಕೊಂಡು ಟಾಸ್ಕ್ ನೀಡಲಾಗುತ್ತಿದೆ. ಮಡಿಕೆ ಮಾಡುವ ಟಾಸ್ಕ್​​ನ ಸ್ಪರ್ಧಿಗಳಿಗೆ ಮೊದಲು ನೀಡಲಾಗಿತ್ತು, ಈ ವೇಳೆ ವಿನಯ್ ಆಡಿದ ಮಾತು ಸಂಗೀತಾ ಕೋಪಕ್ಕೆ ಕಾರಣ ಆಗಿದೆ.

ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ, ಗಂಡಸ್ತರ ಆಡು, ಎಂದು ವಿನಯ್ ಕೂಗಾಡಿದರು. ಇದಕ್ಕೆ ಸಂಗೀತಾ ಸಿಟ್ಟಾಗಿ, ‘ಬಳೆ ಹಾಕ್ಕೊಂಡ್ರೆ ಏನಿವಾಗ? ಏನೋ ಇವಾಗ’ ಎಂದು ಪ್ರಶ್ನೆ ಮಾಡಿದರು. ಇಡೀ ಮನೆ ರಣರಂಗವಾಗಿ ಬದಲಾಯಿತು.

ಸದ್ಯ ವಿನಯ್ ಅವರು ಬಳಕೆ ಮಾಡಿದ ಬಳೆ ಶಬ್ದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮಹಿಳೆಯರು ಬಳೆ ಹಾಕುತ್ತಾರೆ. ಈ ರೀತಿ ಬಳೆ ಹಾಕಿದ ಅನೇಕ ಮಹಿಳೆಯರು ಹಲವು ಸಾಧನೆ ಮಾಡಿದ್ದಾರೆ. ಬಳೆ ಹಾಕಿದವರ ಕೈಯಲ್ಲಿ ಏನೂ ಆಗಲ್ಲ ಎಂಬರ್ಥದಲ್ಲಿ ವಿನಯ್ ಮಾತಾಡಿದ್ದಾರೆ. ಮಹಿಳೆಯರ ಬಗ್ಗೆ ಇಷ್ಟ ತುಚ್ಚವಾಗಿ ನೋಡುವ ಮಾತಾಡುವ ವಿನಯ್ ಅವರು ಕ್ಷಮೆಯಾಚಿಸಬೇಕು. ವೀಕೆಂಡ್​ನಲ್ಲಿ ಈ ವಿಚಾರ ಇಟ್ಟುಕೊಂಡು ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಕಳೆದ ವಾರ ಅವರನ್ನು ಸುದೀಪ್ ಹೊಗಳಿದ್ದರು. ಅವರಿಗೆ ಎದುರಾಳಿ ಯಾರೂ ಇಲ್ಲ ಎಂದು ಹೇಳಲಾಯಿತು. ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ಅವರು ತಪ್ಪು ಮಾಡಿದ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಈಗ ವಿನಯ್ ಅವರ ಮಾತು ಎಲ್ಲೆ ಮೀರುತ್ತಿದೆ.

ಬಿಗ್ ಬಾಸ್ 10 ನೇ ಸೀಸನ್ ಆರಂಭ ದಿನದಿಂದಲೂ ನಟ ವಿನಯ್ ಗೌಡ (Vinay Gowda) ಅವರು ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಈಗ ಮಹಿಳೆಯರ ಬಳೆ ಬಗ್ಗೆ ಮಾತಾಡಿ ಈ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಮುಂದೆ ಏನಾಗುತ್ತೇ ಕಾದು ನೋಡಬೇಕಿದೆ.

Tags: Bangle issuebigbossBJPCongress PartyKarthik gowdaKicchaSangeetha sringerisudeepTanishaVinay gowdaWomenಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿ
Previous Post

Garadi | “ನನ್ನ ಮುಂದಿನ ಸಿನಿಮಾ” ನಿಮಗೇನಾದ್ರು ಗೊತ್ತಾ? ಎಂದ “D” BOSS | @PratidhvaniNews

Next Post

Garadi | ಉತ್ತರ ಕರ್ನಾಟಕದ ಜನರ ಬಗ್ಗೆ “D” BOSS ಏನಂದ್ರು ಗೊತ್ತಾ? | @PratidhvaniNews

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post

Garadi | ಉತ್ತರ ಕರ್ನಾಟಕದ ಜನರ ಬಗ್ಗೆ "D" BOSS ಏನಂದ್ರು ಗೊತ್ತಾ? | @PratidhvaniNews

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada