ಹ್ಯಾಂಗ್ಝೌ: ಪ್ಯಾರಾ ಏಷ್ಯನ್ ಗೇಮ್ಸ್ ನಾಲ್ಕನೇ ದಿನವೂ ಭಾರತ ಪದಕ ಬೇಟೆಯನ್ನು ಮುಂದುವರೆಸಿದೆ. ಮಿಶ್ರಿತ 50m ರೈಫಲ್ಸ್ ಪ್ರೋನ್ SH-1 ಶೂಟಿಂಗ್ನಲ್ಲಿ ಭಾರತದ ಪ್ಯಾರಾ ಅಥ್ಲೀಟಿ ಶೂಟರ್ ಸಿದ್ಧಾರ್ಥ ಬಾಬು 247.7 ಗಮನಾರ್ಹ ಸ್ಕೋರ್ನೊಂದಿಗೆ ಚಿನ್ನ ಗೆದ್ದು ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆ ಬರೆದಿದ್ದಾರೆ.
ಶಾಟ್ ಪುಟ್ನಲ್ಲಿ ಭಾರತದ ಪ್ಯಾರಾ ಅಥ್ಲೀಟಿಗಳು ಚಿನ್ನ ಮತ್ತು ಕಂಚಿನ ಪದಕವನ್ನು ಜಯಿಸಿದ್ದಾರೆ. ಪುರುಷರ ಶಾಟ್ ಪುಟ್-ಎಫ್46ನಲ್ಲಿ ಸಚಿನ್ ಖಿಲಾರಿ 16.03 ಮೀ ಬೃಹತ್ ಎಸೆತದೊಂದಿಗೆ ಚಿನ್ನ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. ಮತ್ತೊಂದೆಡೆ ಇದೇ ವಿಭಾಗದಲ್ಲಿ ರೋಹಿತ್ ಕುಮಾರ್ 14.56 ಮೀ ಎಸೆತದೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಆರ್ಚರಿ ಪುರುಷರ ಡಬಲ್ಸ್ – ಡಬ್ಲೂ1 ಈವೆಂಟ್ನಲ್ಲಿ ಭಾರತದ ಆರ್ಚರಿಗಳಾದ ಆದಿಲ್ ಮೊಹ್ಮದ್ ಮತ್ತು ನವೀನ್ ದಲಾಲ್ ಜೋಡಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ SL-4ನಲ್ಲಿ ಸುಕಾಂತ್ ಕದಮ್ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕವನ್ನು ಪಡೆದರು.
ಪ್ಯಾರಾ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ ಇದುವರೆಗೆ ಒಟ್ಟು 69 ಪದಕಗಳನ್ನು ಗೆದ್ದಿದೆ. ಇದರಲ್ಲಿ 17 ಚಿನ್ನ, 21 ಬೆಳ್ಳಿ ಮತ್ತು 32 ಕಂಚಿನ ಪದಕಗಳು ಸೇರಿವೆ. ಏಷ್ಯನ್ ಪ್ಯಾರಾ ಗೇಮ್ಸ್ 2023 ರ ಪಾಯಿಂಟ್ ಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೇರಿದೆ.